ಸಂಪೂರ್ಣ ಸಾಕ್ಷರತೆಯಿಂದ ಸಾಧನೆ ಸಾಧ್ಯ

IMG-20240216-WA0120
Published on


ಹನಗೋಡು : ಸಂಪೂರ್ಣ ಸಾಕ್ಷರತೆಯಿಂದ ಸಾಧನೆ ಸಾಧ್ಯ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಕೆ.ಸಂತೋಷ್ ಕುಮಾರ್ ಹೇಳಿದರು.
ನೇರಳಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಮಂಗಳವಾರ ಶಿಕ್ಷಣ ಇಲಾಖೆ ಹಾಗೂ ವಯಸ್ಕರ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ನೇರಳಕುಪ್ಪೆ, ಕರಣಕುಪ್ಪೆ, ಕಡೇಮನುಗನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಸ್ವಯಂ ಬೋಧಕರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಳ್ಳಿಗಳು ಸಂಪೂರ್ಣ ಸಾಕ್ಷರತಾ ಗ್ರಾಮಗಳಾಗಲು ಸ್ವಯಂ ಬೋಧಕರು ಸಹಕರಿಸಬೇಕು. ಹುಣಸೂರು ತಾಲೂಕಿನ ಕಾಡಂಚಿನಲ್ಲಿ ವಾಸಿಸುತ್ತಿರುವ ಆದಿವಾಸಿ ಹಾಗೂ ಇತರೆ ಜನರನ್ನು ಸಮೀಕ್ಷೆ ಮಾಡಿ ಈ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಅನಕ್ಷರಸ್ಥರನ್ನು ಗುರುತಿಸಿ, ಅವರನ್ನು ಸಾಕ್ಷರರನ್ನಾಗಿ ಮಾಡುವುದು ಇಲಾಖೆ ಮತ್ತು ಸಮುದಾಯದ ಪ್ರಮುಖ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಮೂರು ಗ್ರಾಪಂ ವ್ಯಾಪ್ತಿಯಲ್ಲಿ
ಬರುವ 1,302 ಜನರಿಗೆ ಅಕ್ಷರ ಕಲಿಸುವ ಸಂಕಲ್ಪ ಮಾಡಲಾಗಿದೆ ಎಂದರು. ಬೋಧನೆ ಮಾಡಲು ಆಗಮಿಸಿದ್ದ 59 ಸ್ವಯಂ ಸೇವಕರ ಆಸಕ್ತಿಯನ್ನು ಅವರು ಶ್ಲಾಘಿಸಿದರು. ಸಹಾಯಕ ಯೋಜನಾಧಿಕಾರಿ ಲಲಿತಾ, ಬಿಆರ್‌ಪಿ ನಂದೀಶ್, ವಯಸ್ಕರ ಶಿಕ್ಷಣ ಇಲಾಖೆ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಸಿ.ಎಸ್ ಮಹೇಶ್, ತ್ರಿನೇಶ, ಪ್ರಭಾಕರ, ಛಾಯಾ, ಪ್ರೌಢಶಾಲಾ ಮುಖ್ಯ ಶಿಕ್ಷಕ ಕುಮಾರಸ್ವಾಮಿ, ನೇರಳಕುಪ್ಪೆ ಶಾಲೆ ಮುಖ್ಯಶಿಕ್ಷಕ ದೊಡ್ಡಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net