ಇ-ಖಾತೆ ತಿದ್ದುಪಡಿಗೆ ಅವಕಾಶ

e katha image SKP
Published on

ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ ಮಾಹಿತಿ

ಸಕಲೇಶಪುರ: ಪುರಸಭೆ ವ್ಯಾಪ್ತಿಯ ಮನೆ ಹಾಗೂ ಇತರೆ ಆಸ್ತಿಗಳಿಗೆ ತಕ್ಷಣವೇ ಇ-ಖಾತೆ ಮಾಡಿಕೊಡುವ ವ್ಯವಸ್ಥೆಯನ್ನು ಸರ್ಕಾರ ರೂಪಿಸಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಶ್ವರಪ್ಪ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುರಸಭೆ ವ್ಯಾಪ್ತಿಯಲ್ಲಿ ಹಳೇಮನೆಗಳ ದುರಸ್ಥಿ ಅಥವಾ ಹಳೆ ಬಡವಾವಣೆಯಲ್ಲಿ ಹೊಸಮನೆ ನಿರ್ಮಿಸಲು ಇ ಖಾತೆಗಾಗಿ ಸಾಕಷ್ಟು ಅಡ್ಡಿಗಳಿದ್ದ ಕಾರಣ ಸಾವಿರಾರು ಜನರು ಹಲವು ವರ್ಷಗಳಿಂದ ಪರದಾಡುತ್ತಿದ್ದರು. ಇದನ್ನು ಮನಗಂಡ ಸರ್ಕಾರ ಆಸ್ತಿ ಕಣಜ ಎಂಬ ತತ್ರಾಂಶ ಬಿಡುಗಡೆ ಮಾಡಿದೆ. ಈ ತತ್ರಾಂಶದ ಮೂಲಕ ತಮ್ಮ ಜಮೀನಿನ ದಾಖಲೆಗಳ ಗಣಕೀಕರಣ ಮಾಡಿಸಿಕೊಳ್ಳುವ ವ್ಯವಸ್ಥೆ ರೂಪಿಸಿದೆ. ಆದ್ದರಿಂದ, ಪುರಸಭೆಯ 23 ವಾರ್ಡ್‌ಗಳಲ್ಲಿ ಇ-ಖಾತೆ ಹೊಂದಿಲ್ಲದ ಜನರು ಫೆಬ್ರವರಿ 25 ರೊಳಗೆ ತಮ್ಮ ಆಸ್ತಿಪತ್ರ ಸಲ್ಲಿಕೆ ಮಾಡುವ ಮೂಲಕ ತಕ್ಷಣವೆ ಖಾತೆ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net