

ಸವದತ್ತಿ: ಮಹಾನ್ ಸಂತ ಸೇವಾಲಾಲರ ಆದರ್ಶಗಳನ್ನು ಯುವಕರು ಪಾಲಿಸಬೇಕೆಂದು ಕಾಂಗ್ರೆಸ್ ಮುಖಂಡ ಅಶ್ವತ್ಥ ವೈದ್ಯ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ ಸಂತ ಸೇವಾಲಾಲ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಂಜಾರ ಭವನ ನಿರ್ಮಾಣಕ್ಕೆ ನಿವೇಶನ ಹಾಗೂ ಸೇವಾಲಾಲ ಸ್ಮಾರಕ ನಿರ್ಮಾಣಕ್ಕೆ ಬೇಕಾಗುವ ಜಾಗವನ್ನು ಶಾಸಕರೊಂದಿಗೆ ಚರ್ಚಿಸಲಾಗುವುದು ಎಂದರು.
ತಹಸೀಲ್ದಾರ್ ಮಧುಸೂಧನ ಕುಲಕರ್ಣಿ ಮಾತನಾಡಿ, ಬಂಜಾರ ಸಮುದಾಯದ ಏಳಿಗೆಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ.ಟೋಪೋಜಿ ಮಾತನಾಡಿದರು. ಉಪತಹಸೀಲ್ದಾರ್ ಎಂ.ವಿ. ಗುಂಡಪ್ಪಗೋಳ, ಶಿರಸ್ತೇದಾರ ಶಶಿರಾಜ ವನಕಿ, ಸವದತ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲು ಜಕಾತಿ, ರಾಮಾಚಾರಿ ಲಮಾಣಿ, ಪ್ರಕಾಶ ಲಮಾಣಿ, ರವಿ ಲಮಾಣಿ, ವಿಜಯ ಲಮಾಣಿ, ಪುಂಡಲೀಕ ಲಮಾಣಿ, ರಾಹುಲ ಲಮಾಣಿ, ರಾಜು ಲಮಾಣಿ ಇತರರಿದ್ದರು.