ಸಂತ ಸೇವಾಲಾಲ್ ಭಾವಚಿತ್ರ ಮೆರವಣಿಗೆ

1602-KRT
ಕಾರಟಗಿ ತಾಲೂಕಿನ ಸಿದ್ದಾಪುರದಲ್ಲಿ ಸಂತ ಸೇವಾಲಾಲ್ ಜಯಂತಿ ನಿಮಿತ್ತ ಬಂಜಾರ ಸಮುದಾಯದಿಂದ ಪೂರ್ಣಕುಂಭ ಮೆರವಣಿಗೆ ನಡೆಯಿತು.
Published on

ಕಾರಟಗಿ: ತಾಲೂಕಿನ ಸಿದ್ದಾಪುರದಲ್ಲಿ ಸಂತ ಸೇವಾಲಾಲ್ ಜಯಂತಿ ನಿಮಿತ್ತ ಬಂಜಾರ ಸಮುದಾಯದಿಂದ ಶನಿವಾರ ಸೇವಾಲಾಲ್‌ರ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಸಂತ ಸೇವಾಲಾಲ್‌ರ ಅಲಂಕೃತ ಭಾವಚಿತ್ರದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನೆಡಸಲಾಯಿತು. ಮಹಿಳೆಯರು ಪೂರ್ಣ ಕುಂಭದೊಂದಿಗೆ ಮೂಲಕ ಮೆರಗು ತಂದರು.

ಮಹಿಳೆಯರು ಸಮುದಾಯದ ವೇಷಭೂಷಣಗಳನ್ನ ಧರಿಸಿ ಹಾಡುತ್ತಾ ನೃತ್ಯ ಮಾಡಿದ್ದು, ನೋಡುಗರ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ಜೈಕಿಸಾನ್ ತಾಂಡಾ ಹಾಗೂ ಅರುಣೋದಯ ತಾಂಡಾ, ಸಿದ್ದಾಪುರ ಸೇರಿ ಇತರ ಗ್ರಾಮಸ್ಥರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net