ಸಂತ ಸೇವಾಲಾಲ್ ಜಯಂತಿ ಸಂಭ್ರಮ

15bdvt2
ಭದ್ರಾವತಿ ನಗರಸಭೆ ಕಚೇರಿಯಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಿಸಲಾಯಿತು. ಲತಾ ಚಂದ್ರಶೇಖರ್, ಸರ್ವಮಂಗಳಾ ಬೈರಪ್ಪ, ಕಾಂತರಾಜ್, ಪ್ರೇಮಾ ಇತರರಿದ್ದರು.
Published on

ಭದ್ರಾವತಿ: ದಾರ್ಶನಿಕರ ಜಯಂತಿಗಳನ್ನು ಆಚರಿಸಲು ಸಕಾರದಿಂದ ನಿರ್ದೇಶನ ನೀಡಿರುವುದು ಸಂತಸದ ವಿಷಯ ಎಂದು ಕಂದಾಯಾಧಿಕಾರಿ ರಾಜ್‌ಕುಮಾರ್ ತಿಳಿಸಿದರು.

ನಗರಸಭೆ ಕಚೇರಿಯಲ್ಲಿ ಗುರುವಾರ ಸಂತ ಸೇವಾಲಾಲ್ ಜಯಂತಿ ಆಚರಣೆ ವೇಳೆ ಮಾತನಾಡಿದ ಅವರು, ಸರ್ಕಾರದ ಆಶಯ ಜಯಂತಿ ಆಚರಣೆ ಮಾತ್ರವಲ್ಲ, ಸರ್ಕಾರಿ ನೌಕರರು ಸಹ ದಾರ್ಶನಿಕರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಾಗಿದೆ ಎಂದರು.
ಸಂತ ಸೇವಾಲಾಲ್ ಅವರು ನೆರೆಯ ದಾವಣಗೆರೆ ಜಿಲ್ಲೆಯವರು ಎಂಬುದು ನಮ್ಮೆಲ್ಲರ ಹೆಮ್ಮೆಯಾಗಿದೆ. ಅವರು ಇಡೀ ಸಮಾಜವನ್ನು ಅವರ ವಿಚಾರಧಾರೆಗಳ ಮೂಲಕ ಜಾಗೃತಗೊಳಿಸಿದ ಮಹನೀಯ. ಅವರ ಆದರ್ಶ ಪ್ರತಿಯೊಬ್ಬರಿಗೂ ದಾರಿದೀಪವಾಗಲಿ ಎಂದು ಆಶಿಸಿದರು.
ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್, ಉಪಾಧ್ಯಕ್ಷೆ ಸರ್ವಮಂಗಳಾ ಬೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಜಯಶೀಲ, ಪ್ರೇಮಾ ಬದರಿ ನಾರಾಯಣ್, ಗೋವಿಂದಸ್ವಾಮಿ, ಸುನಿತಾ, ಪೌರಾಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net