ಸೈಂಟ್ ಲಾರೆನ್ಸ್ ಇಗರ್ಜಿ ವಾರ್ಷಿಕ ಸಮಾರಂಭ

bali pooje
ಪೆರ್ಮುದೆ ಸೈಂಟ್ ಲಾರೆನ್ಸ್ ಇಗರ್ಜಿ ವಾರ್ಷಿಕ ಸಮಾರಂಭದಲ್ಲಿ ಬೇಳ ಶೋಕಮಾತಾ ಇಗರ್ಜಿ ಧರ್ಮಗುರು ವಂದನೀಯ ಫಾದರ್ ಸ್ಟ್ಯಾನಿ ಪಿರೇರಾ ಬಲಿಪೂಜೆ ನೆರವೇರಿಸಿದರು.
Published on

ಕಾಸರಗೋಡು: ಪೆರ್ಮುದೆ ಸೈಂಟ್ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ಇಗರ್ಜಿ ವಾರ್ಷಿಕ ಸಮಾರಂಭ ಭಾನುವಾರ ಜರುಗಿತು. ಬಲಿಪೂಜೆಗೆ ಬೇಳ ಶೋಕಮಾತಾ ಇಗರ್ಜಿ ಧರ್ಮಗುರು ವಂದನೀಯ ಫಾದರ್ ಸ್ಟ್ಯಾನಿ ಪಿರೇರಾ ನೆರವೇರಿಸಿದರು.

ಕಯ್ಯರು ಕ್ರಿಸ್ತರಾಜ ದೇವಾಲಯ ಧರ್ಮಗುರು ವಂದನೀಯ ಫಾದರ್ ವಿಶಾಲ್ ಮೋನಿಸ್, ಫಾದರ್ ಅರುಣ್ ಡಿ.ಸೋಜ, ಫಾದರ್ ಸನಿಲ್ ಡಿ.ಸೋಜ, ಫಾದರ್ ಪ್ರಶಾಂತ್ ಪಿಂಟೋ, ಫಾದರ್ ವಿಜಯ್ ಡಿ.ಸೋಜ, ಫಾದರ್ ಅರುಣ್, ಪೆರ್ಮುದೆ ಇಗರ್ಜಿ ಧರ್ಮಗುರು ಫಾದರ್ ಹೆರಾಲ್ಡ್ ಡಿ.ಸೋಜ, ಸಹಾಯಕ ಧರ್ಮಗುರು ಫಾದರ್ ಕ್ಲೋಡ್ ಕೋರ್ಡಾ ಉಪಸ್ಥಿತರಿದ್ದರು.

ಲಾರೆನ್ಸ್ ಗ್ರೊಟ್ಟೋಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಇಗರ್ಜಿ ಪಾಲನಾ ಸಮಿತಿ ಉಪಾಧ್ಯಕ್ಷ ಡೋರಿನ್ ಪಿರೇರಾ, ಕಾರ್ಯದರ್ಶಿ ಲ್ಯಾನ್ಸಿ ಡಿ.ಸೋಜ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net