ಸೈನಿಕ ಶಾಲೆಯಲ್ಲಿ ಕಾರ್ಯಗಾರ

sainik school
Published on

ಮಡಿಕೇರಿ:

ಕೂಡಿಗೆ ಕೊಡಗು ಸೈನಿಕ ಶಾಲೆಯಲ್ಲಿ ಈಚೆಗೆ ಕಲಾ ಏಕೀಕರಣ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ದಿವ್ಯಾ ಸಿಂಗ್ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಕಲೆಯ ಮಹತ್ವ ಕುರಿತು ವಿವರಿಸುವುದರೊಂದಿಗೆ, ವಿದ್ಯಾರ್ಥಿಗಳಿಗೆ ಕಲೆಯೊಂದಿಗೆ ಅಧ್ಯಯನವನ್ನು ಹೇಗೆ ಊರ್ಜಿಸಿಕೊಳ್ಳಬಹುದು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು. ಕಲೆಯ ಮೂಲಕ ಸೃಜನಶೀಲತೆ, ವ್ಯಕ್ತಿತ್ವ ವಿಕಾಸ ಹಾಗೂ ಅಧ್ಯಯನದ ಮೇಲಿನ ಆಸಕ್ತಿ ಹೆಚ್ಚಿಸಬಹುದೆಂಬುದನ್ನು ವಿವರಿಸಿದರು. ಕಾರ್ಯಾಗಾರದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ ಹಾಗೂ ಕಲ್ಪನೆಯನ್ನಾಧರಿಸಿದ ಆಕರ್ಷಕ ಚಿತ್ರಗಳನ್ನು ರಚಿಸುವುದರ ಮೂಲಕ ಕಾರ್ಯಾಗಾರದ ಮೆರುಗನ್ನು ಹೆಚ್ಚಿಸಿದರು.

ಶಾಲೆಯ ಕಲಾ ಶಿಕ್ಷಕಿ ಭೀಮಾಂಬಿಕಾ ಜಿ. ಭೋವಿ, ಎನ್‌ಡಿಎ ಕ್ಲಬ್ ಮೇಲ್ವಿಚಾರಕಿ ವಿ.ಎಸ್. ಶ್ರೀಲೇಖಾ, ದಾದಾ ಕೆ. ಕುಸನಾಳೆ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಕ್ರಿಯಾಶೀಲತೆಯಿಂದ ಪಾಲ್ಗೊಂಡಿದ್ದರು.

ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್, ಉಪಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಮೊಹಮದ್ ಷಾಜಿ, ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್, ಹಿರಿಯ ಶಿಕ್ಷಕ ವಿಬಿನ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net