ಸೈನಿಕ ಶಾಲೆಯಲ್ಲಿ ಹಾಕಿ ಪಂದ್ಯಾವಳಿ

sainik school
Published on

ಕುಶಾಲನಗರ:

ಕೂಡಿಗೆಯ ಕೊಡಗು ಸೈನಿಕ ಶಾಲೆಯ ಅಸ್ಟೊçà ಟರ್ಫ್ ಹಾಕಿ ಮೈದಾನದಲ್ಲಿ ಅಖಿಲ ಭಾರತೀಯ ಸೈನಿಕ ಶಾಲೆಗಳ ಗುಂಪು- ಹೆಚ್ ವಿಭಾಗದ ಹಾಕಿ ಪಂದ್ಯಾವಳಿ - 2025 ಜೂ. 9 ರಿಂದ 13ರ ತನಕ ನಡೆಯಿತು. ಕೇರಳದ ಸೈನಿಕ ಶಾಲೆ ಕಝಕೂಟಂ, ಆಂಧ್ರಪ್ರದೇಶದ ಸೈನಿಕ ಶಾಲೆ ಕಲಿಕಿರಿ, ತಮಿಳುನಾಡಿನ ಸೈನಿಕ ಶಾಲೆ ಅಮರಾವತಿನಗರ ಹಾಗೂ ಆತಿಥೇಯ ಕೊಡಗು ಸೈನಿಕ ಶಾಲೆಯ ತಂಡಗಳು ಭಾಗವಹಿಸಿದ್ದವು. ಬಾಲಕರ ಜೂನಿಯರ್, ಬಾಲಕರ ಸಬ್ ಜೂನಿಯರ್ ಹಾಗೂ ಬಾಲಕಿಯರ ಜೂನಿಯರ್ ವಿಭಾಗದಲ್ಲಿ ಸ್ಪರ್ಧೆಗಳು ನಡೆದವರು.

ಕ್ರೀಡಾಕೂಟವನ್ನು ಶಾಲೆಯ ಪ್ರಭಾರ ಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಭಾಗವಹಿಸಿದ್ದ ತಂಡಗಳು ಆಕರ್ಷಕ ಪಥಸಂಚನ ನಡೆಸಿದವು. ನಂತರ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಈ ವೇಳೆ ಮಾತನಾಡಿದ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ ಕ್ರೀಡಾಪಟುಗಳ ಶಿಸ್ತು, ಕ್ರೀಡಾಸ್ಫೂರ್ತಿ ಮತ್ತು ಉತ್ಸಾಹವನ್ನು ಪ್ರಶಂಸಿಸಿದರು. ಈ ಸ್ಪರ್ಧೆ ಕ್ರೀಡಾಸ್ಪೂರ್ತಿ ಹಾಗೂ ಸಾಂಘಿಕ ಹೋರಾಟದಿಂದ, ಆರೋಗ್ಯಯುತ ಮನಸ್ಸಿನೊಂದಿಗೆ ಕೂಡಿರಬೇಕು. ಇದರೊಂದಿಗೆ ಸ್ಪರ್ಧಾಳುಗಳು ತಮ್ಮೆಲ್ಲಾ ಸ್ಪರ್ಧೆಗಳಲ್ಲಿ ಸ್ನೇಹಪೂರ್ವಕವಾದ ಹಾಗೂ ನ್ಯಾಯಯುತವಾದ ಆಟದ ಮೌಲ್ಯಗಳನ್ನು ಪಾಲಿಸಬೇಕು ಎಂದರು.

ಶುಕ್ರವಾರ (ಜೂ.13) ಪಂದ್ಯಾವಳಿಯ ಸಮಾರೋಪ ಸಮಾರಂಭ ನಡೆಯಿತು. ಶಾಲೆಯ ಮತ್ತೊಬ್ಬ ಪ್ರಭಾರ ಪ್ರಾಂಶುಪಾಲ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ವಿಜೇತ ತಂಡಗಳಿಗೆ ಪಾರಿತೋಷಕ, ಪದಕ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಆಟಗಾರರ ಆತ್ಮವಿಶ್ವಾಸ, ಕ್ರೀಡಾ ಮನೋಭಾವನೆ ಮತ್ತು ಸಾಂಘಿಕ ಹೋರಾಟದ ಪ್ರದರ್ಶನಕ್ಕೆ ತಮ್ಮ ಶ್ಲಾಘನೆ ವ್ಯಕ್ತಪಡಿಸಿದರು. ಇದರೊಂದಿಗೆ ಅತ್ಯುತ್ತಮ ಆಟಗಾರರು ಮತ್ತು ಗೋಲ್ಕೀಪರ್‌ಗಳ ಅದ್ಭುತ ಪ್ರದರ್ಶನವನ್ನು ಪ್ರಶಂಸಿಸಿದರು. ಅಲ್ಲದೆ, ಈ ಕಾರ್ಯಕ್ರಮ ಯಶಸ್ವಿಯಾಗಲು ಸಹಕಾರ ನೀಡಿದ ಕ್ರೀಡಾ ಶಾಲೆ ಹಾಗೂ ಕರ್ನಾಟಕ ಸರ್ಕಾರದ ಅಭೂತಪೂರ್ವ ಸಹಕಾರಕ್ಕೆ ಅವರು ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸಿದರು.

ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿ, ಭಾಗವಹಿಸಿದ್ದ ಸೈನಿಕ ಶಾಲೆಗಳ ಮೇಲ್ವಿಚಾರಕರು, ಶಾಲೆಯ ಎನ್ ಸಿ ಸಿ ಸಿಬ್ಬಂದಿ ವರ್ಗ, ದೈಹಿಕ ಶಿಕ್ಷಕರು ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಈ ಸಂದರ್ಭ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net