ಸೈನಿಕ ಶಾಲೆ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ಕಾರ್ಯಕ್ರಮ

sainik school
Published on

ಕುಶಾಲನಗರ:

ಕೂಡಿಗೆಯ ಕೊಡಗು ಸೈನಿಕ ಶಾಲೆಯ ಎನ್‌ಸಿಸಿ ಘಟಕದ ವತಿಯಿಂದ ಕೂಡಿಗೆ ತರಕಾರಿ ಮಾರುಕಟ್ಟೆಯಲ್ಲಿ ಪರಿಸರ ಸ್ನೇಹಿ ಕಾರ್ಯಕ್ರಮದಡಿಯಲ್ಲಿ ಶಾಲಾ ಮಕ್ಕಳು ತಯಾರಿಸಿದ ಪೇಪರ್ ಕವರ್‌ಗಳನ್ನು ಮಾರುಕಟ್ಟೆಯಲ್ಲಿದ್ದ ಎಲ್ಲಾ ವ್ಯಾಪಾರಿಗಳಿಗೆ ಶನಿವಾರ ವಿತರಿಸಲಾಯಿತು. ಇದೇ ವೇಳೆ ಮಾರುಕಟ್ಟೆಗೆ ಆಗಮಿಸಿದ್ದ ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಕವರ್ ಬಳಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು. ಜತೆಗೆ ಎಲ್ಲಾ ಗ್ರಾಹಕರು ಮತ್ತು ವ್ಯಾಪಾರಿಗಳು ಮುಂದಿನ ದಿನಗಳಲ್ಲಿ ಪೇಪರ್ ಕವರ್ ಬಳಕೆ ಮಾಡಬೇಕೆಂದು ಮನವಿ ಮಾಡಿಕೊಳ್ಳಲಾಯಿತು.

ಈ ಎಲ್ಲಾ ಪೇಪರ್ ಕವರ್‌ಗಳನ್ನು ಶಾಲೆಯ ವಿದ್ಯಾರ್ಥಿಗಳೇ ತಯಾರು ಮಾಡಿ ವಿತರಿಸಿದರು. ಇದಕ್ಕೂ ಮೊದಲು ಪೇಪರ್ ಕವರ್ ತಯಾರಿಕೆಯ ಕುರಿತು ಮಕ್ಕಳಿಗೆ ಕಾರ್ಯಗಾರ ನಡೆಸಲಾಯಿತು. ದಿವ್ಯ ಸಿಂಗ್ ನೇತೃತ್ವದಲ್ಲಿ ಕಾರ್ಯಾಗಾರ ನಡೆಯಿತು. ಈ ಕಾರ್ಯಗಾರದಲ್ಲಿ ಮಕ್ಕಳು ಸಾವಿರಾರು ಪೇಪರ್ ಕವರ್ ಗಳನ್ನು ತಯಾರು ಮಾಡುವುದರೊಂದಿಗೆ, ಪರಿಸರದ ಸಂರಕ್ಷಣೆಯಲ್ಲಿ ಪೇಪರ್ ಕವರ್‌ಗಳ ಮಹತ್ವ ತಿಳಿದುಕೊಂಡರು. ಪೇಪರ್ ಕವರ್‌ಗಳನ್ನು ತಯಾರಿಸುತ್ತಾ ಕಲಿಕೆಯ ನೇರ ಅನುಭವ ಪಡೆದರು.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಶ್ರೀಲೇಖ, ರಾಜಗೋಲ್ಕರ್, ಅಶೋಕನ್, ದಾದಾ ಕುಸ್ನಾಳೆ, ನೂತನ, ಭೀಮಾಂಬಿಕ, ಸಲ್ಮಾ, ಸುಬೇದಾರ್ ಬಲ್ಬಿರ್ ಸಿಂಗ್, ಹವಲ್ದಾರ್ ಸುಮಿತ್ ಗುಂಡು ಹಾಗೂ ಶಾಲೆಯ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net