

ಮಡಿಕೇರಿ:
ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ಧ್ರುವ ವಿ. ಭಾರದ್ವಾಜ್ ಮತ್ತು ಅಚಲ್ ಥೇನುವಾ ಭಾರತೀಯ ನೌಕಾಪಡೆಯ ಪ್ರತಿಷ್ಠಿತ ಸ್ಪರ್ಧೆಗಳಲ್ಲೊಂದಾದ ರಾಷ್ಟ್ರೀಯ ಮಟ್ಟದ ಕ್ವಿಜ್ ಸ್ಪರ್ಧೆ ಥಿಂಕ್ಯೂ-2025 ಸೆಮಿ ಪೈನಲ್ ಹಂತ ತಲುಪಿ ಸಾಧನೆ ಮಾಡಿದ್ದಾರೆ. ಕೇರಳದ ಎಝಿಮಲಾದಲ್ಲಿರುವ ಭಾರತೀಯ ನೌಕಾ ಅಕಾಡೆಮಿಯಲ್ಲಿ ಈಚೆಗೆ ನಡೆದ ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಪ್ರದರ್ಶನವು ತೀಕ್ಷ÷್ಣ ಬುದ್ಧಿಮತ್ತೆ, ತಂಡದ ಮನೋಭಾವ ಮತ್ತು ನಿಜವಾದ ಸ್ಪರ್ಧಾ ಮನೋಭಾವವನ್ನು ಪ್ರತಿಬಿಂಬಿಸಿತು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಭಾರತೀಯ ನೌಕಾ ಅಕಾಡೆಮಿಯ ಕಮಾಂಡAಟ್ ವೈಸ್ ಅಡ್ಮಿರಲ್ ಮನೀಷ್ ಚಡ್ಡಾ ಅವರಿಂದ ಈ ವಿದ್ಯಾರ್ಥಿಗಳು ಗೌರವ ಮತ್ತು ಬಹುಮಾನ ಸ್ವೀಕರಿಸಿದರು. ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಅಪರೂಪದ ಅವಕಾಶವೂ ಇವರಿಬ್ಬರಿಗೆ ಸಿಕ್ಕಿತು.
ಶಾಲೆಯ ವಿಜ್ಞಾನ ಶಿಕ್ಷಕ ದಾದಾ ಧರೆಪ್ಪ ಕುಸನಾಳೆ ಈ ಇಬ್ಬರು ವಿದ್ಯಾರ್ಥಿಗಳು ಮಾರ್ಗದರ್ಶನ ನೀಡಿದ್ದರು.
ಈ ಕುರಿತು ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಇದು ಕೊಡಗು ಸೈನಿಕ ಶಾಲೆ ಕುಟುಂಬದ ಎಲ್ಲರಿಗೂ ಹೆಮ್ಮೆಯ ಕ್ಷಣವಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ವಿದ್ಯಾರ್ಥಿಗಳ ಈ ಸಾಧನೆ ಅವರ ಶಿಸ್ತು, ತ್ಯಾಗ ಹಾಗೂ ಶಾಲೆಯ ಸಮಗ್ರ ಅಭಿವೃದ್ಧಿಯ ಪ್ರತಿಬಿಂಬವಾಗಿದೆ. ಶಾಲೆಯು ಮುಂದಿನ ದಿನಗಳಲ್ಲಿ ತಮ್ಮ ವಿದ್ಯಾರ್ಥಿಗಳಲ್ಲಿ ಧೈರ್ಯ, ಕುತೂಹಲ ಮತ್ತು ನಿಷ್ಠೆಯ ಮೌಲ್ಯಗಳನ್ನು ಬೆಳೆಸಿ, ಅವರಲ್ಲಿ ಉನ್ನತ ಸ್ಥಾನವನ್ನು ಕಲ್ಪಿಸುವ ಉದ್ದೇಶವನ್ನು ಜೀವಂತವಾಗಿಡುತ್ತಿದೆ ಎಂದರು.