ನಗರದ ಸಾಯಿಬಾಬಾ ಮಂದಿರದಲ್ಲಿ ಸಾಯಿ ಸಚ್ಚರಿತ್ರೆ ಪ್ರವಚನ

30GDG03
Published on

ವಿಜಯವಾಣಿ ಸುದ್ದಿಜಾಲ ಗದಗ
ಗುರುವನ್ನು ಪರೀಸಬಾರದು, ಗುರುವಿಗೆ ಸಂರ್ಪೂಣವಾಗಿ ಶರಣಾಗತಿ ಆಗಬೇಕು. ಗುರುವಿನಲ್ಲಿ ಶ್ರದ್ಧಾಭಕ್ತಿಯಿಂದ ನಡೆದುಕೊಂಡಲ್ಲಿ ವರಸಿದ್ಧಿ ಪ್ರಾಪ್ತವಾಗಲು ಸಾಧ್ಯ ಎಂದು ಗದುಗಿನ ಆಧ್ಯಾತ್ಮಿಕ ಚಿಂತಕ, ತ ವೈದ್ಯ ಡಾ. ಸಂಗಮನಾಥ ಬಸಪ್ಪ ಶೆಟ್ಟರ ಅಭಿಪ್ರಾಯಪಟ್ಟರು.
ನಗರದ ಸಾಯಿಬಾಬಾ ಮಂದಿರದಲ್ಲಿ ಗುರುರ್ಪೂಣಿಮೆ ಅಂಗವಾಗಿ ಗರುವಾರ ಎರ್ಪಡಿಸಿದ್ದ ಸಾಯಿ ಸಚ್ಚರಿತ್ರೆ ಪ್ರವಚನ ಮಾಲಿಕೆಯಲ್ಲಿ ಪ್ರವಚನ ನೀಡಿ ಮಾತನಾಡಿದರು.
"ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ' ಎಂಬ ಮಾತಿದೆ. ಗುರುಶಿಷ್ಯರು ಹೇಗಿರಬೇಕು ಎಂಬುದನ್ನು ಸಂತ ಶಿಶುನಾಳ ಶರೀರ ಹಾಗೂ ಕಳಸದ ಗುರುಗೋವಿಂದ ಭಟ್ಟರ ಸಂಬಂಧ ಪರೀೆಯೊಂದರಿಂದ ತಿಳಿಯಬಹುದಾಗಿದೆ. ತ್ಯಾಗ ಮತ್ತು ವಿರಕ್ತ ಮನೋಭಾವ ಇದ್ದ ಭಕ್ತಿವಂತರನ್ನು ಆಶೀರ್ವದಿಸುತ್ತಿದ್ದ ಶಿರಡಿ ಸಾಯಿ ಬಾಬಾ ಅವರು ಆಡಂಬರವನ್ನು ಒಪ್ಪತ್ತಿರಲಿಲ್ಲ ಎಂದರು.
ಪ್ರಸಾದ ಸೇವೆ ವಹಿಸಿಕೊಂಡಿದ್ದ ಐ. ಕೆ. ಬಲೂಚಗಿ, ಡಾ. ಎಸ್​. ಡಿ. ಯರಗೇರಿ, ಮೋಹನ್​ ಹೊಸೂರ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಶಿರಡಿ ಸಾಯಿಬಾಬಾ ಸತ್ಸಂಗ ಸಮಿತಿಯ ಅಧ್ಯ ಮಹೇಶ ತಲೆಗೌಡ್ರ, ಸತ್ಸಂಗ ಬಳಗ, ಮಹಿಳೆಯರು ಕಾರ್ಯಕ್ರಮದಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net