ಸಾಯಿಬಾಬಾ ಭಾವಚಿತ್ರ ಮೆರವಣಿಗೆ ಅದ್ದೂರಿ

Kudlgi Saibaba
ಗುಡೇಕೋಟೆ ಗ್ರಾಮದಲ್ಲಿ ಭಾನುವಾರ ಸಾಯಿಬಾಬಾ ಅವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಗ್ರಾಪಂ ಅಧ್ಯಕ್ಷ ಕೃಷ್ಣ, ಪ್ರಮುಖರಾದ ರಾಜಣ್ಣ ಗೌಡ್ರು, ವಿ.ನಾಗರಾಜ್, ಗೋವಿಂದ, ಬಸವರಾಜ್, ಪ್ರಶಾಂತ್ ಇತರರಿದ್ದರು.
Published on

ಕೂಡ್ಲಿಗಿ: ಗುರು ಪೂರ್ಣಿಮೆ ಅಂಗವಾಗಿ ಭಾನುವಾರ ಗುಡೇಕೋಟೆ ಗ್ರಾಮದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.

ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಸರದಿಯಲ್ಲಿ ನಿಂತು ದರ್ಶನ ಪಡೆದು ಭಕ್ತಿ ಸಮರ್ಪಿಸಿದರು. ಬೆಳಗ್ಗೆ ಗ್ರಾಮದ ಶಾಲೆಯಿಂದ ಪಾರ್ವತಿ ದೇವಸ್ಥಾನದವರೆಗೆ ಸಕಲ ವಾದ್ಯಮೇಳಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಬಾಬಾ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.

ನಂತರ ಕಾಕಡಾರತಿ, ಕ್ಷೀರಾಭಿಷೇಕ, ಸತ್ಯನಾರಾಯಣ ಪೂಜೆ, ಅಷ್ಟೋತ್ತರ ಪುಷ್ಪಾರ್ಚನೆ ನೆರವೇರಿತು. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಗ್ರಾಪಂ ಅಧ್ಯಕ್ಷ ಎನ್. ಕೃಷ್ಣ ಮಾತನಾಡಿದರು.

ಶ್ರೀ ಸಾಯಿರಾಂ ಸೇವಾ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಎರ‌್ರಿಸ್ವಾಮಿ, ಪಾಲಾಕ್ಷಪ್ಪ, ಮಹೇಶ್, ಗಾಯತ್ರಿ, ಅಕ್ಕಮ್ಮ, ಮಂಗಳಮ್ಮ, ರಾಜಣ್ಣಗೌಡ್ರು, ವಿ.ನಾಗರಾಜ್, ಗೋವಿಂದ, ಬಸವರಾಜ್, ಪ್ರಶಾಂತ್, ಅಜಯ್, ರಾಮಾಂಜನಿ, ಆನಂದ ಆಚಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net