ಸಾಯಿ ಪ್ರಾರ್ಥನಾ ರಾವ್ ಭರತನಾಟ್ಯ ರಂಗಪ್ರವೇಶ

rangapravesha
Published on

ಮೈಸೂರು: ವಿದುಷಿ ಮಿತ್ರಾ ನವೀನ್ ಅವರ ಶಿಷ್ಯೆ ಎಚ್.ಸಾಯಿ ಪ್ರಾರ್ಥನಾ ರಾವ್ ‘ಭರತನಾಟ್ಯ ರಂಗಪ್ರವೇಶ’ ಮಾಡಲು ಅಣಿಯಾಗಿದ್ದಾರೆ.


ನಾದವಿದ್ಯಾಲಯ ಸಂಗೀತ ಮತ್ತು ನೃತ್ಯ ಅಕಾಡೆಮಿಯು ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಜ. 7ರಂದು ಸಂಜೆ 5.30ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ರಂಗ ಪ್ರವೇಶ ಮಾಡಲಿದ್ದಾರೆ. ಈ ವೇಳೆ ನಾನಾ ನೃತ್ಯಬಂಧಗಳನ್ನು ಪ್ರಸ್ತುತ ಪಡಿಸಲಿದ್ದಾರೆ.

ಇವರಿಗೆ ಹಿಮ್ಮೇಳದಲ್ಲಿ ಗುರು ವಿದುಷಿ ಮಿತ್ರಾ ನವೀನ್ (ಪರಿಕಲ್ಪನೆ, ನೃತ್ಯ ನಿರ್ದೇಶನ ಮತ್ತು ನಟುವಾಂಗ), ವಿದ್ವಾನ್ ನವೀನ್ ಅಂದಗಾರ್ (ಹಾಡುಗಾರಿಕೆ), ವಿದ್ವಾನ್ ವಿವೇಕ್ ಕೃಷ್ಣ (ಕೊಳಲು) ಹಾಗೂ ವಿದ್ವಾನ್ ಜಿ.ಎಸ್.ನಾಗರಾಜ್ (ಮೃದಂಗ) ಸಾಥ್ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net