ಗುರು ಪೂರ್ಣಿಮಾ ಆಚರಣೆಗೆ ಸಾಯಿಮಂದಿರ ಸಿದ್ದ *8 ಸಾವಿರ ಭಕ್ತರಿಗೆ ರುದ್ರಕ್ಷಿ ವಿತರಣೆ

RAICHUR
RAICHUR
Published on

 ರಾಯಚೂರು ನಗರದ ಸಾಯಿ ಧ್ಯಾನ ಮಂದಿರದಲ್ಲಿ ಗುರು ಪೂರ್ಣಿಮಾವನ್ನು ಅದ್ದೂರಿಯಾಗಿ ಆಚರಣೆಗೆ ಮಂದಿರದ ಧರ್ಮಾಧಿಕಾರಿ ಸಾಯಿ ಕಿರನ ಅದೋನಿ ನೇತೃತ್ವದಲ್ಲಿ ಸಕಾಲ ಸಿದ್ದತೆ ಮಾಡಿಕೊಂಡಿದ್ದಾರೆ.

ಈ ಬಾರಿಯ ಗುರುಪೂರ್ಣಿಮವು ಗುರುವಾರ ಬಂದಿರವುದರಿಂದ ಸಾಯಿ ಬಾಬಾರಿಗೆ ಬೆಳಗ್ಗೆ 6ಕ್ಕೆ ಕಾಕಡಾರತಿ, 6.30 ಕ್ಕೆ ಮಹಾರುದ್ರಾಭಿಷೇಕ, 7.30ಕ್ಕೆ ಪುಷ್ಪಾಭಿಷೇಕ, 8.30ಕ್ಕೆ ಸಾಯಿ ಸತ್ಯನಾರಾಯಣ ಪೂಜೆಯನ್ನು ವಿವಿಧ ವಿಧ್ವಾಂಸರಿಂದ ಜರುಗಲಿದೆ. ಮಧ್ಯಾಹ್ನ 12.15 ಕ್ಕೆ ಮಹಾಮಂಗಳಾರತಿ, ಸಂಜೆ 6ಕ್ಕೆ ಧೂಪಾರತಿ ಹಾಗೂ ಪಲ್ಲಕಿ ಸೇವೆ ಜರುಗಲಿದೆ.

ಭಕ್ತರಿಗಾಗಿ ಅನ್ನದಾಸೋಹ ಪ್ರತಿ ವರ್ಷ ಧ್ಯಾನ ಮಂದಿರದಲ್ಲಿ ಸಾಯಿ ಭಕ್ತರಿಗೆ ಅನ್ನದಾಸೋಹವನ್ನು ಏರ್ಪಡಿಸಲಾಗುತ್ತದೆ.

ಆದರಂತೆ ಈ ಬಾರಿಯು 8 ಸಾವಿರ ಭಕ್ತರಿಗಾಗುವಷ್ಟು ವಿವಿಧ ಬಗೆಯ ಭೋಜನವನ್ನು ಬಾಣಸಿಗರು ತಯಾರು ಮಾಡಲು ಸಿದ್ದರಾಗಿದ್ದಾರೆ. ಕಳೆದ ಬಾರಿ ಒಟ್ಟು 20 ಸಾವಿರ ಭಕ್ತರು ಆಗಮಿಸಿದ್ದು, ಈ ಬಾರಿ ಮಂದಿರ ಮತ್ತಷ್ಟೂ ಅಭಿವೃದ್ದಿಯಾಗಿದ್ದರಿಂದ 30 ಸಾವಿರ ಭಕ್ತರು ಅಗಮಿಸುವ ನಿರೀಕ್ಷೆ ಇದೆ. ಇದರ ಜೆತೆಗೆ ಕಾರ್ಯಕ್ರಮಕ್ಕೆ ಸಣ್ಣ ನೀರಾವರಿ ಸಚಿವ ಎನ್. ಎಸ್. ಬೋಸರಾಜು, ನಗರ ಶಾಸಕ ಡಾ.ಶಿವರಾಜ ಪಾಟೀಲ್, ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಹಾಗೂ ಗಣ್ಯರು ಅಗಮಿಸಲಿದ್ದಾರೆ.

ನಗರದಲ್ಲಿ ಮೊದಲ ಬಾರಿಗೆ ಶನಿದೇವ ಪ್ರತಿಷ್ಠಾನ

ರಾಯಚೂರು ನಗರದಲ್ಲಿ ಮೊದಲ ಬಾರಿಗೆ ಶಿರಡಿ ಸಾಯಿಬಾಬಾ ಸೇವಾ ಚಾರಿಟೇಬಲ್ ಟ್ರಸ್ಟ್ ಹಾಗೂ ಓಂ ಸಾಯಿ ಮಂದಿರ ವತಿಯಿಂದ ಶನಿ ಮಹಾರಾಜರ ಪ್ರತಿಷ್ಠಾನೆ ಮಾಡಿದ್ದು, ಇತ್ತಿಚ್ಚಿಗೆ ಉಜ್ಜಯಿನಿಯಿಂದ ಆಗಮಿಸಿದ ಅಘೋರಿಗಳು ಶನಿ ಮಹಾರಾಜ ಪ್ರತಿಷ್ಠಾಪನೆ ಮಾಡಲಾಗಿದೆ. ಗುರುಪೂರ್ಣಿಮಾದಂದು ಮಂದಿರಕ್ಕೆ ಆಗಮಿಸುವ ಭಕ್ತರಿಗೆ 8 ಸಾವಿರ ರುದ್ರಾಕ್ಷಿಗಳನ್ನು ಉಚಿತವಾಗಿ ವಿತರಣೆ ಮಾಡುತ್ತಿರುವುದು ವಿಶೇಷವಾಗಿದೆ. ಇದರಿಂದ ಭಕ್ತರಿಗೆ ನೀಡಲಾಗುತ್ತದೆ ಅದರಿಂದ ಶನಿ ಕಾಟಗಳು ತಪ್ಪುತ್ತವೆ ಎನ್ನುವುದು ನಂಬಿಕೆ.

ಈ ಬಾರಿ ಗುರು ಪೂರ್ಣಿಮಾವನ್ನು ಸಾಯಿ ಧ್ಯಾನಮಂದಿರದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಮಂದಿರಕ್ಕೆ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ಮೊದಲ ಬಾರಿಗೆ ನಗರದಲ್ಲಿ ಶನಿ ಮಹಾರಾಜರನ್ನು ಸ್ಥಾಪನೆ ಮಾಡಲಾಗಿದ್ದು, 8 ಸಾವಿರ ರುದ್ರಾಕ್ಷಿಗಳನ್ನು ಭಕ್ತರಿಗೆ ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ಸಾಯಿ ಕಿರಣ ಆದೋನಿ ಸಂಸ್ಥಾಪಕ ಓಂ ಸಾಯಿ ಮಂದಿರ ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net