ಶ್ರಾವಣದಲ್ಲಿ ಭಕ್ತರ ಇಷ್ಟಾರ್ಥ ಈಡೇರಿಕೆ

dj clk pooje
Published on

ಚಳ್ಳಕೆರೆ: ಶ್ರಾವಣ ಮಾಸದ ಪೂಜಾ ಕಾರ್ಯಗಳಿಂದ ಭಕ್ತರ ಇಷ್ಟಾರ್ಥಗಳು ನೆರವೇರಲಿವೆ ಎನ್ನುವ ನಂಬಿಕೆ ಇದೆ ಎಂದು ಸಾಯಿ ಮಂದಿರ ಪ್ರಚಾರ ಸಮಿತಿ ಅಧ್ಯಕ್ಷ ಬಿ.ವಿ. ಚಿದಾನಂದಮೂರ್ತಿ ಅಭಿಪ್ರಾಯಪಟ್ಟರು.

ನಗರದ ಹೊರವಲಯ ವೆಂಕಟಸಾಯಿ ಬಾಬಾ ಮಂದಿರದಲ್ಲಿ ಸೋಮವಾರ ಶ್ರಾವಣ ಮಾಸ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಮತ್ತು ಅನ್ನ ಪ್ರಸಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರಾವಣದ ಪ್ರತಿ ಗುರುವಾರ, ಶನಿವಾರ ಮತ್ತು ಭಾನುವಾರ ವಿಶೇಷ ಪೂಜಾ ಕಾರ್ಯಗಳೊಂದಿಗೆ ಅನ್ನ ಪ್ರಸಾದ ಇರುತ್ತದೆ.

2017ರಲ್ಲಿ ಸ್ಥಾಪಿತವಾದ ಸಾಯಿ ಮಂದಿರದಲ್ಲಿ ಗಣಪತಿ ಹೋಮ, ಅಭಿಷೇಕ, ನಿತ್ಯ ಆರತಿ ಪ್ರತಿ ವಾರದಲ್ಲಿ ಒಮ್ಮೆ ಪಲ್ಲಕ್ಕಿ ಸೇವೆಗಳು ನಡೆಯುತ್ತವೆ ಎಂದರು.

ಸಾಯಿಬಾಬಾ ಸ್ಥಾಪಿತ ಮಂದಿರದಲ್ಲಿ ದತ್ತಾತ್ರೇಯ, ಗಣಪತಿ ಮತ್ತು ಅಭಯಾಂಜನೇಯ ಮೂರ್ತಿಗಳನ್ನು ಇರಿಸಲಾಗಿದೆ. ಪ್ರತಿ ಪೂಜಾ ಕಾರ್ಯದಲ್ಲಿ ಅಭಿಷೇಕ, ಅರ್ಚನೆ ಬಳಿಕ ಬಾಬಾಗೆ ವಿಶೇಷ ಪೂಜೆ ಸಲ್ಲಿಸುವ ಪದ್ಧತಿ ಇದೆ ಎಂದು ತಿಳಿಸಿದರು.

ನಗರದ ಬಾಬಾ ಮಂದಿರದಿಂದ ಪಾವಗಡ ಶನಿಮಹಾತ್ಮನ ದೇವಸ್ಥಾನ 77 ಕಿ.ಮೀ. ಅಂತರದಲ್ಲಿದೆ. ಧಾರ್ಮಿಕ ಶ್ರೇಷ್ಟತೆಯ ಸ್ಥಳವಾಗಿ ಸಾಯಿ ಮಂದಿರ ಭಕ್ತರ ನೆಲೆಯಾಗಿ ಬೆಳೆಯುತ್ತಿದೆ ಎಂದರು.

ಟ್ರಸ್ಟ್ ಕಾರ್ಯದರ್ಶಿ ಎಂ.ಆರ್. ರವಿಪ್ರಸಾದ್, ಖಜಾಂಜಿ ಕೆ. ನಾಗೇಶ್, ಆಹಾರ ಸಮಿತಿ ಅಧ್ಯಕ್ಷ ಸಿ.ಆರ್.ಶ್ರೀನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net