

ಚಿಕ್ಕೋಡಿ: ಸಾಯಿ ಸೇವಾ ಪರಿವಾರ ವಾರ್ಷಿಕೋತ್ಸವ ನೆಪದಲ್ಲಿ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಮಾಡುವ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ಪಟ್ಟಣದ ಶಿರಡಿ ಸಾಯಿ ಬಾಬಾ ಮಂದಿರದ 18ನೇ ವಾರ್ಷಿಕೋತ್ಸವ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಹಾಗೂ ಹಿರಿಯ ನಾಗರಿಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, 17 ವರ್ಷಗಳಲ್ಲಿ ಸಾಯಿ ಪರಿವಾರ 500ಕ್ಕೂ ಹೆಚ್ಚು ಸಾಮೂಹಿಕ ಮದುವೆ ಮಾಡುವ ಮೂಲಕ ಬಡವರಿಗೆ ಆಶಾದೀಪವಾಗಿದೆ ಎಂದರು.
ನಿಡಸೋಸಿ ಸಿದ್ದಸಂಸ್ಥಾನ ಮಠದ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಸಾಯಿ ಪರಿವಾರ ಭಾರತೀಯ ಸಂಸ್ಕೃತಿ ಉಳಿಸುವ ಕಾರ್ಯ ಮಾಡುತ್ತಿದೆ ಎಂದರು.
ಸಮ್ಮುಖ ವಹಿಸಿದ್ದ ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ 35 ಜೋಡಿ ನವ ದಂಪತಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶೇಗುಣಸಿ ವಿರಕ್ತಮಠದ ಡಾ.ಮಹಾಂತ ಪ್ರಭು ಸ್ವಾಮೀಜಿ, ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿದರು.
ಡಾ.ಮಹಾಂತೇಶ ರಾಮನ್ನವರ, ವಿಜಯ ಮಾಂಜರೇಕರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸೀತವ್ವ ಜೋಡಟ್ಟಿ, ಆರ್.ಡಿ. ಸಂಕನ್ನವರ, ಅರುಣ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.
ಮುಖಂಡರಾದ ಜಗದೀಶ ಕವಟಗಿಮಠ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವೀಣಾ ಕವಟಗಿಮಠ, ಆಧಿನಾಥ ಶೆಟ್ಟಿ, ರಮೇಶ ಕುಡತರಕರ, ಸುಭಾಸ ಕವಲಾಪೂರೆ, ಎಸ್.ಬಿ. ಪಡಲಾಳೆ, ಶರತಚಂದ್ರ ಕವಟಗಿಮಠ, ಅಜಯ ಕವಟಗಿಮಠ, ಸತೀಶ ಅಪ್ಪಾಜಿಗೋಳ, ಪುರಸಭೆ ಸದಸ್ಯ ಪ್ರವೀಣ ಕಾಂಬಳೆ, ಸಂಜಯ ಕವಟಗಿಮಠ, ಅಶೋಕ ಪಾಠಕ, ಕಿರಣ ಗುಂಡೆ, ಭಾಸ್ಕರ ಶೆಟ್ಟಿ, ಮಡಿವಾಳಪ್ಪ ಬಸ್ಸರಗಿ, ಷಡಕ್ಷರಿ ಮೂಗೇರಿ, ಸಂಜಯ ಗಿಡವೀರ, ಲೋಕಪ್ಪ ದುಂಬಾಳಿ, ಶ್ರೀಧರ ದೀಕ್ಷಿತ, ರಾಘವೇಂದ್ರ ಡಂಬಳ, ಶಿವಜಾತ ಮಿರ್ಜೆ, ಸಾಗರ ಬಿಸ್ಕೋಪ್, ಶಾಂಭವಿ ಅಶ್ವತ್ಥಪುರ, ಡಾ.ಸುರೇಶ ಉಕ್ಕಲಿ, ಬಸವರಾಜ ರುಕಡೆ ಇತರರಿದ್ದರು.