ಸಾಯಿಬಾಬಾ ಮಂದಿರಕ್ಕೆ ಪಲ್ಲಕ್ಕಿ ಅರ್ಪಣೆ

Sai Baba Temple, Palanquin Offering, Talikote,
ತಾಳಿಕೋಟೆ ಪಟ್ಟಣದ ಶಿರಡಿ ಸಾಯಿಬಾಬಾ ಮಂದಿರಕ್ಕೆ ಸಾವಿತ್ರಿಬಾಯಿ ರಾಜಣ್ಣ ಲೋಕರೆ (ಮಸ್ಕಿ ಬಳಗಾನೂರ) ದಂಪತಿ ಪಲ್ಲಕ್ಕಿಯನ್ನು ದೇಣಿಗೆ ನೀಡಿದರು. ರಾಘವೇಂದ್ರ ಕರ್ಣಿ, ಮೋತಿಲಾಲ ಮಹೇಂದ್ರಕರ, ಅಮೃತಾ ಕರ್ಣಿ, ಲಕ್ಷ್ಮೀಬಾಯಿ ಮಹೇಂದ್ರಕರ, ಡಾ.ಎಲ್.ಎನ್.ಶೆಟ್ಟಿ ಇತರರಿದ್ದರು.
Published on

ತಾಳಿಕೋಟೆ: ಸ್ಥಳೀಯ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ್ ಕಮಿಟಿ ವತಿಯಿಂದ ನಿರ್ಮಾಣಗೊಳ್ಳಲು ಸಜ್ಜಾಗಿರುವ ಶಿರಡಿ ಸಾಯಿಬಾಬಾ ಮಂದಿರಕ್ಕೆ ಸಾವಿತ್ರಿಬಾಯಿ ರಾಜಣ್ಣ ಲೋಕರೆ (ಮಸ್ಕಿ ಬಳಗಾನೂರ) ದಂಪತಿ ಶುಕ್ರವಾರ ಪಲ್ಲಕ್ಕಿ ಅರ್ಪಿಸಿ ಭಕ್ತಿಭಾವ ಮೆರೆದರು.

ಕಾರ್ಯಕ್ರಮಕ್ಕೆ ಮೊದಲು ಅಂಬಾಭವಾನಿ ಮಂದಿರದ ಬಲಭಾಗದಲ್ಲಿ ಗಂಗಸ್ಥಳ ಹಾಗೂ ಸಾಯಿಬಾಬಾ ಮಹಾಮೂರ್ತಿಗೆ ಮಹಾಭಿಷೇಕ ಜರುಗಿತು. ವೇ.ವಸಂತ ಜೋಶಿ ಹಾಗೂ ಅರ್ಚಕರಾದ ಭೀಮಾಶಂಕರ ಮಹಾಪೂಜೆ ಮಾಡಿ ಉತ್ಸವಕ್ಕೆ ಚಾಲನೆ ನೀಡಿದರು.

ಅಂಬಾಭವಾನಿ ಮಂದಿರದಿಂದ ಪ್ರಾರಂಭಗೊಂಡ ಉತ್ಸವ ಕತ್ರಿ ಬಜಾರ ಮಾರ್ಗವಾಗಿ ಬಾಲಾಜಿ ಮಂದಿರ ರಸ್ತೆ ಮೂಲಕ ಸಂಚರಿಸಿ ನಿಮಿಷಾಂಬಾದೇವಿ ಮಂದಿರಕ್ಕೆ ತಲುಪಿತು. ದಾನಿ ರಾಜಣ್ಣ ಲೋಕರೆ, ರಾಘವೇಂದ್ರ ಕರ್ಣಿ, ಮೋತಿಲಾಲ ಮಹೇಂದ್ರಕರ, ಅಮೃತಾ ಕರ್ಣಿ, ಲಕ್ಷ್ಮೀಬಾಯಿ ಮಹೇಂದ್ರಕರ ಅವರು ಟ್ರಸ್ಟ್ ಕಮಿಟಿಯ ಗೌರವಾಧ್ಯಕ್ಷ ಡಾ.ಎಲ್.ಎನ್.ಶೆಟ್ಟಿ ಅವರಿಗೆ ಪಲ್ಲಕ್ಕಿ ಒಪ್ಪಿಸಿದರು.

ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಮದರಕಲ್ಲ, ಉಪಾಧ್ಯಕ್ಷ ಎಂ.ಜಿ.ಪಾಟೀಲ, ಕಾರ್ಯದರ್ಶಿ ಸಿ.ಬಿ.ತಿಳಗೂಳ, ಸತೀಶ ದಪ್ತೆದಾರ, ದತ್ತಾತ್ರೇಯ ಲೋಕರೆ, ಶಿವಲಿಂಗ ಸಾಲಂಕಿ, ಸುಭಾಸ ಸಾಲಂಕಿ, ಕಾಶಿನಾಥ ಪಾಟೀಲ, ಜಿ.ಟಿ.ಘೋರ್ಪಡೆ, ಕೆ.ಸಿ.ಸಜ್ಜನ, ಶಿಲ್ಪಾ ಕಿಣಗಿ, ಕಾಶಿನಾಥ ಬೇದರಕರ, ಗಿರೀಶ ಮಹೇಂದ್ರಕರ, ಅಕ್ಷಯ ಬಾಸುತಕರ, ವಿ.ಬಿ.ಲೋಕರೆ, ಆನಂದ ಕುಲಕರ್ಣಿ, ಸುನೀಲ ಮಹೇಂದ್ರಕರ, ದೀಪಾ ಬೇದರಕರ, ರೇಖಾ ಹಂಚಾಟೆ, ಕಲಾವತಿ ಬಾಸುತಕರ, ಅಂಬ್ರೇಶ ಹೂಗಾರ, ವಿನೋದ ಲೋಕರೆ, ಎ.ಜಿ.ಹೂಗಾರ, ಗುರಪ್ಪ ಹೇರೂರ, ಮಹಾನಂದಾ ನಿಡಗುಂದಿ, ಸುಧಾ ನಿಡಗುಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net