ರೇವಡಿಹಾಳದಲ್ಲಿ ಗುರು ಪೂರ್ಣಿಮೆ

IMG-20240706-WA0027.jpg
Published on

ಹುಬ್ಬಳ್ಳಿ: ತಾಲೂಕಿನ ರೇವಡಿಹಾಳ ಮಹಾಬಲೇಶ್ವರ ಲೇಔಟ್ ನ ಶ್ರೀ ಸದ್ಗುರು ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಜುಲೈ 21ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಅಂದು ಬೆಳಗ್ಗೆ ವಿದ್ಯಾಗಣಪತಿ, ಶಿರಡಿ ಸಾಯಿಬಾಬಾ ಹಾಗೂ ಶನೇಶ್ವರ ಸ್ವಾಮಿಗೆ ಮಹಾಸಂಕಲ್ಪ, ಮಹಾರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸತ್ಯನಾರಾಯಣ ಪೂಜೆ, ಬೃಹಸ್ಪತಿ ಹೋಮ, ಮಹಾಪ್ರಸಾದ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.

ಸಂಜೆ 5ಕ್ಕೆ ಅಭಿನಂದನೆ ಸಮಾರಂಭ ನಡೆಯಲಿದೆ. ರಾಯನಾಳದ ಶ್ರೀ ಅಭಿನವ ರೇವಣಸಿದ್ದೇಶ್ವರ ಸ್ವಾಮೀಜಿ, ದಯಾನಂದ ವಿದ್ಯಾರಣ್ಯ ಗುರುಕುಲದ ಶ್ರೀ ಸ್ವಾಮಿ ಚಿದ್ರೂಪಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಗೋಕುಲದ ಹಾಲಯ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಸಚಿವರು, ಶಾಸಕರು, ಲೋಕಸಭೆ ಸದಸ್ಯರು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net