

ಮಂಗಳೂರು: ಅಡ್ಯಾರ್‌ನ ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರಿಂಗ್ ಮ್ಯಾನೇಜ್ಮೆಂಟ್‌ನ 2022-24ನೇ ಎಂಬಿಎ ತಂಡವನ್ನು ಕಿರಿಯ ಎಂಬಿಎ ವಿದ್ಯಾರ್ಥಿಗಳು ವಿಶಿಷ್ಟವಾಗಿ ಇತ್ತೀಚೆಗೆ ಬಿಳ್ಕೊಟ್ಟರು.
‘ಭವಿಷ್ಯಕ್ಕಾಗಿ ಒಂದು ಗಿಡ’ ಎಂಬ ಧ್ಯೇಯ ವಾಕ್ಯದೊಂದಿಗೆ ಹಿರಿಯ ಕಿರಿಯ ವಿದ್ಯಾರ್ಥಿಗಳು ವ್ಯಕ್ತಿಗೊಂದು ಗಿಡವೆಂಬಂತೆ ವಿವಿಧ ಬೀಜಗಳನ್ನು ಬಿತ್ತುವ ಮುಖಾಂತರ ಮುಂದಿನ ಪೀಳಿಗೆಗಾಗಿ ಒಂದೊಂದು ಗಿಡವನ್ನು ನೆಡುವ ಕಾರ್ಯಕ್ರಮ ಮಾಡಲಾಯಿತು. ಸಹ್ಯಾದ್ರಿ ಕಾಲೇಜಿನ ಟ್ರಸ್ಟಿ ದೇವದಾಸ್ ಹೆಗಡೆಯವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 300 ವಿವಿಧ ಬೀಜಗಳನ್ನು ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳು, ನಾರ್ದರ್ನ್ ಸ್ಕೈ ಪ್ರಾಪರ್ಟೀಸ್ ಸಂಸ್ಥೆಯ ನಿರ್ದೇಶಕರಾದ ಕೃತಿನ್ ಅಮೀನ್ ಇವರು ಬೀಜ ಬಿತ್ತುವ ಮುಖಾಂತರ ಉದ್ಘಾಟಿಸಿದರು.
ಎಂಬಿಎ ವಿಭಾಗದ ನಿರ್ದೇಶಕರಾದ ಡಾಕ್ಟರ್ ವಿಶಾಲ್ ಸಮರ್ಥ, ವಿದ್ಯಾರ್ಥಿ ಸಂಘಟನೆಯ ಸಂಯೋಜಕರಾದ ಪ್ರೊ. ಪದ್ಮನಾಭ, ಡೀನ್ ಪ್ರೊ. ರಮೇಶ್ ಕೆ.ಜಿ. ಹಾಗೂ ಇತರ ಉಪನ್ಯಾಸಕ ವರ್ಗದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಲ್ಲಿ ಬೆಳೆದ ಗಿಡಗಳನ್ನು ಮುಂದಿನ ವರ್ಷ ಬೇರೆ ಬೇರೆ ಸ್ಥಳಗಳಲ್ಲಿ ನೆಡುವ ಜವಾಬ್ದಾರಿಯನ್ನು ಕಿರಿಯ ವಿದ್ಯಾರ್ಥಿಗಳಿಗೆ ವಹಿಸಲು ಉದ್ದೇಶಿಸಲಾಗಿದೆ.