ಸಾಹಿತ್ಯ ಸಮ್ಮೇಳನ ಪ್ರಚಾರರಥಕ್ಕೆ ಚಾಲನೆ

ಫೋಟೋ ಶೀರ್ಷಿಕೆ 05,ಸಿಆರ್_ಪಿ-2ಎ
ಕಸಬಾ ಹೋಬಳಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ರಥಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ ನೀಡಿದರು. ದಯಾನಂದ್ ಶೆಟ್ಟಿಹಳ್ಳಿ, ಹೊನ್ನಶೆಟ್ಟಿಹಳ್ಳಿ ಗಿರಿರಾಜ್ ಇತರರು ಇದ್ದರು.
Published on

ಚನ್ನರಾಯಪಟ್ಟಣ : ಸಾಹಿತ್ಯ ಸಮ್ಮೇಳನಗಳು ತಾಲೂಕು ಮಟ್ಟದಲ್ಲಿ ನಡೆದಿದ್ದು, ಇದೇ ಮೊದಲ ಬಾರಿಗೆ ಹೋಬಳಿ ಮಟ್ಟದಲ್ಲಿ ನಡೆಯುತ್ತಿರುವುದು ವಿಶೇಷ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಶ್ಲಾಘಿಸಿದರು.

ಪಟ್ಟಣದ ಮಿನಿವಿಧಾನಸೌಧದ ಮುಂಭಾಗದಲ್ಲಿ ಫೆ.8 ರಂದು ಆಯೋಜನೆಗೊಂಡಿರುವ ಕಸಬಾ ಹೋಬಳಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲ್ಕೆರೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜನೆಗೊಂಡಿರುವ ಕಸಬಾ ಹೋಬಳಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರನ್ನು ಸೆಳೆಯಲು ಪ್ರಚಾರ ರಥ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಪ್ರಚಾರ ರಥವು ಫೆ.7 ರವರೆಗೆ ತಾಲೂಕಿನ ಎಲ್ಲ ಭಾಗಗಳಲ್ಲೂ ಸಂಚರಿಸಿ ಸಮ್ಮೇಳನಕ್ಕೆ ಆಹ್ವಾನ ನೀಡಲಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಕಸಬಾ ಹೋಬಳಿ ಘಟಕದ ಅಧ್ಯಕ್ಷ ದಯಾನಂದ್ ಶೆಟ್ಟಿಹಳ್ಳಿ, ಸಾಹಿತಿ ಹೊನ್ನ ಶೆಟ್ಟಿಹಳ್ಳಿ ಗಿರಿರಾಜ್, ಕಾರ್ಯಾಧ್ಯಕ್ಷ ಸಿ.ವಿ.ಲೋಹಿತ್, ಕೋಶಾಧ್ಯಕ್ಷ ತಿರುಮಲೇಗೌಡ, ಗೌರವ ಕಾರ್ಯದರ್ಶಿ ಸಿ.ಆರ್. ಕುಮಾರ್, ಸಿ.ಜಿ.ಭಾರತೀಶ್, ಪದಾಧಿಕಾರಿಗಳಾದ ಗೋಪಾಲ್, ರುದ್ರೇಶ್, ಉಪಾಧ್ಯಕ್ಷ ಸಿ.ಬಿ.ಗಂಗಾಧರ್, ಪರಿಸರ ಪ್ರೇಮಿ ಚಾ.ನ. ಅಶೋಕ್, ಬಿಆರ್‌ಸಿ ಅನಿಲ್ ಕುಮಾರ್, ಶಿವನಗೌಡ ಪಾಟೀಲ್, ಜಬಿವುಲ್ಲಾ ಬೇಗ್, ತಾರಾ ರಮೇಶ್, ಯಶೋದಾ ಜೈನ್, ಇತರರು ಉಪಸಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net