ಸಾಹಿತ್ಯ, ಬರಹಗಾರರನ್ನು ಪ್ರೋತ್ಸಾಹಿಸಲು ಬೇಕಿದೆ ವೇದಿಕೆಗಳು: ಜಗನ್ನಾಥ ರಾಠೋಡ

KAVI GOSHTI
ಗಂಗಾವತಿಯಲ್ಲಿ ಆಯೋಜಿಸಿದ್ದ ಸ್ವರಾಜ್ಯ-ಸುರಾಜ್ಯ ಜಿಲ್ಲಾಮಟ್ಟದ ಕವಿಗೋಷ್ಠಿಯನ್ನು ಕೆಪಿಟಿಸಿಎಲ್ ನೌಕರರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಗನ್ನಾಥ ರಾಠೋಡ ಭಾನುವಾರ ಉದ್ಘಾಟಿಸಿದರು. ಪರಿಷದ್ ವಿಭಾಗೀಯ ಸಂಚಾಲಕ ಅಶೋಕ ರಾಯ್ಕರ್, ತಾಲೂಕು ಅಧ್ಯಕ್ಷ ಯಂಕಪ್ಪ ಕಟ್ಟಿಮನಿ, ಜಿಲ್ಲಾ ಕಾರ್ಯದರ್ಶಿ ಶರಣಪ್ಪ ತಳ್ಳಿ ಇತರರಿದ್ದರು.
Published on

ಗಂಗಾವತಿ: ಕಾವ್ಯ ಮತ್ತು ಸಾಹಿತ್ಯದಿಂದ ದೇಶದ ಭವ್ಯ ಪರಂಪರೆ ತಿಳಿದಿದ್ದು, ಸಾಹಿತ್ಯ ಪ್ರಕ್ರಿಯೆ ನಿರಂತರವಾಗಬೇಕಿದೆ ಎಂದು ಕೆಪಿಟಿಸಿಎಲ್ ನೌಕರರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಗನ್ನಾಥ ರಾಠೋಡ ಹೇಳಿದರು.

ನಗರದ ಜೆಸ್ಕಾಂ ಕಚೇರಿ ನೌಕರರ ಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಸ್ವರಾಜ್ಯ-ಸುರಾಜ್ಯ ಜಿಲ್ಲಾಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ವಿಜಯನಗರ ಸಾಮ್ರಾಜ್ಯದ ವೈಭವ ಅರಿಯಲು ಸಾಹಿತ್ಯ ಮತ್ತು ಕಾವ್ಯದಿಂದ ಸಾಧ್ಯವಾಗಿದ್ದು, ಭವ್ಯ ಪರಂಪರೆ ಅನಾವರಣಗೊಂಡಿದೆ. ಸಾಹಿತ್ಯ ಮತ್ತು ಬರಹಗಾರರನ್ನು ಪ್ರೋತ್ಸಾಹಿಸಲು ವೇದಿಕೆಗಳ ಅಗತ್ಯವಿದ್ದು, ಸ್ಪರ್ಧೆಗಳ ಮೂಲಕ ಹೊಸ ಬರಹಗಾರರನ್ನು ಗುರುತಿಸಬೇಕಿದೆ ಎಂದು ತಿಳಿಸಿದರು.

ಪರಿಷದ್ ವಿಭಾಗೀಯ ಸಂಚಾಲಕ ಅಶೋಕ ರಾಯ್ಕರ್ ಮಾತನಾಡಿ, ಸಾಹಿತ್ಯಕ್ಕೆ ತನ್ನದೇ ಮೌಲ್ಯವಿದ್ದು, ಇತಿಹಾಸ ತಿಳಿಯಲು ಸಹಕಾರಿಯಾಗಿದೆ. ಸ್ಪರ್ಧೆ ಮೂಲಕ ಹೊಸಬರನ್ನು ಗುರುತಿಸಲಾಗುತ್ತಿದ್ದು, ಜಿಲ್ಲಾಮಟ್ಟದಲ್ಲಿ ಆಯ್ಕೆಯಾದ ಕಾವ್ಯಗಳನ್ನು ಪ್ರಾಂತ ಮಟ್ಟದಲ್ಲಿ ಪರಿಗಣಿಸಲಾಗುತ್ತಿದೆ. ಉತ್ತಮ ಕಾವ್ಯಗಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು ಎಂದರು.

ಕವಿಗೋಷ್ಠಿಯಲ್ಲಿ 30ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು. ಸ್ಪರ್ಧೆ ಕುರಿತು ಜಿಲ್ಲಾ ಕಾರ್ಯದರ್ಶಿ ಶರಣಪ್ಪ ತಳ್ಳಿ ಮಾತನಾಡಿದರು. ಸಾಹಿತಿಗಳಾದ ನಾಗಭೂಷಣ ಅರಳಿ, ಮನೋಹರ ಬೊಂದಾಡೆ, ಕೆಸಿಎಸ್ ಮಹಿಳಾ ಪದವಿ ಕಾಲೇಜಿನ ಉಪನ್ಯಾಸಕ ಡಾ.ವಾಣಿಶ್ರೀ ಪಾಟೀಲ್, ಕರುಣಾ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಮುಖ್ಯಸ್ಥೆ ಸಿ.ಮಹಾಲಕ್ಷ್ಮೀ ಕೇಸರಹಟ್ಟಿ, ಪರಿಷದ್ ತಾಲೂಕು ಅಧ್ಯಕ್ಷ ಯಂಕಪ್ಪ ಕಟ್ಟಿಮನಿ ಇತರರಿದ್ದರು. ಶಿಕ್ಷಕ ಟಿ.ಶ್ರೀಧರ್ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net