ದೊಡ್ಡವಾಡಗೆ ಇತಿಹಾಸ ಚಿಂತನ ರತ್ನ ಪ್ರಶಸ್ತಿ ಪ್ರದಾನ

IMG-20250112-WA0030.jpg
Published on

ಹುಬ್ಬಳ್ಳಿ: ಇಲ್ಲಿನ ಕನಕದಾಸ ಕಲಾ ಮಹಾವಿದ್ಯಾಲಯದಲ್ಲಿ ಜರುಗಿದ ಚುಟುಕು ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾರ್ಗದರ್ಶಕ ಮಂಡಳಿ ನಿರ್ದೇಶಕ, ಜನಪರ ಹೋರಾಟಗಾರ ಗಂಗಾಧರ ದೊಡವಾಡ ಅವರಿಗೆ ಇತಿಹಾಸ ಚಿಂತನ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನಕದಾಸ ಮಹಾವಿದ್ಯಾಲಯದ ಮುಖ್ಯಸ್ಥ  ಶಾಂತಣ್ಣ ಕಡಿವಾಲ,  ಬಸವೇಶ್ವರ ರೂರಲ್ ಎಜುಕೇಶನ್ ಟ್ರಸ್ಟ್  ಅಧ್ಯಕ್ಷ ಶರಣಪ್ಪ ಕೊಟಗಿ,  ಶ್ರೇಯಾ ಜನ ಸೇವಾ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ವಿ.ಜಿ. ಪಾಟೀಲ್, ಉದ್ಯಮಿ ರಮೇಶ ಮಾದೇವಪ್ಪನವರ, ಸಾಹಿತಿ ಪದ್ಮಜಾ ಉಮರ್ಜಿ,  ಡಾ. ರಾಮು ಮೂಲಗಿ, ಇತರರು ಉಪಸ್ಥಿತರಿದ್ದರು.

ಚುಟುಕು ಸಾಹಿತ್ಯ ಪರಿಷತ್ ಸಂಚಾಲಕ  ಕೃಷ್ಣಮೂರ್ತಿ ಕುಲಕರ್ಣಿ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net