

ಮಡಿಕೇರಿ:
'ಸ್ವ'ತ್ವಯುತ ಸಾಹಿತಿಗಳ ಸಂಪರ್ಕ ಅಭಿಯಾನದಡಿಯಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷದ್ ಕೊಡಗು ಜಿಲ್ಲಾ ಘಟಕದಿಂದ ಕೊಡಗಿನ ಇಬ್ಬರು ಹಿರಿಯ ಸಾಹಿತಿಗಳ ಮನೆಗೆ ಭೇಟಿ ಕಾರ್ಯಕ್ರಮ ಸೋಮವಾರ ನಡೆಯಿತು. ಪ್ರಾಂತ್ಯ ಭಾಷೆಗಳನ್ನು ಮೀರಿ ಸಾಹಿತ್ಯ ಬಲವರ್ಧನೆಯನ್ನು ಭಾರತದಲ್ಲಿ ಒಗ್ಗೂಡಿಸಿ ವೃದ್ಧಿಸುವ ನಿಟ್ಟಿನಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷದ್ ಕಾರ್ಯನಿರ್ವಹಿಸುತ್ತಿದೆ.
ಈ ನಿಟ್ಟಿನಲ್ಲಿ ಇದೇ ವರ್ಷ ದಾವಣಗೆರೆಯಲ್ಲಿ ಜೂ. 7 ಮತ್ತು 8ರಂದು ಅಭಾಸಾಪÀ ರಾಜ್ಯ ಸಮಾವೇಶ ನಡೆಯಲಿದೆ. ಹಾಗಾಗಿ ಕೊಡಗು ಅಭಾಸಾಪ ಘಟಕದಿಂದ ಜಿಲ್ಲೆಯ ಹಿರಿಯ ಸಾಹಿತಿಗಳಾದ ಗಿರೀಶ್ ಕಿಗ್ಗಾಲು ಮತ್ತು ಜಲ ಕಾಳಪ್ಪನವರ ನಿವಾಸಕ್ಕೆ ಭೇಟಿ ಕೊಟ್ಟು ಅವರುಗಳನ್ನು ಸನ್ಮಾನಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
ಕೊಡಗು ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಕಾರ್ಯದರ್ಶಿ ಚೌಡ್ಲು ಮನೆ ತಮ್ಮಯ್ಯ, ನಿರ್ದೇಶಕರಾದ ಸಿ. ಎಸ್. ಸುರೇಶ್ ಹಾಗೂ ಸಹಕಾರ್ಯದರ್ಶಿ ಹೇಮಂತ್ ಪಾರೇರ ಈ ಸಂದರ್ಭ ಇದ್ದರು.