ನುಡಿಜಾತ್ರೆ ವೆಚ್ಚದ ವಿವರಣೆ ನೀಡಿಲ್ಲ: ಸಾಹಿತಿ ರಾಜೇಂದ್ರ ಪ್ರಸಾದ್ ಆರೋಪ

Sahiti Rajendra Prasad Press Conference Mandya
Published on

ಮಂಡ್ಯ: ಪ್ರಗತಿಪರ ಸಂಘಟನೆಗಳ ಒಕ್ಕೂಟದ ಆಗ್ರಹದ ಮೇರೆಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮುಖ್ಯವರದಿ ನೀಡಿದೆ. ಆದರೆ ಸರಿಯಾದ ವಿವರಣೆ ನೀಡಿಲ್ಲ ಎಂದು ಸಾಹಿತಿ ರಾಜೇಂದ್ರ ಪ್ರಸಾದ್ ಆರೋಪಿಸಿದರು.

ಜಿಲ್ಲಾಡಳಿತ ನೀಡಿರುವ ವರದಿಯಲ್ಲಿ ದುಂದುವೆಚ್ಚದ ಕುರುಹುಗಳು ಕಾಣುತ್ತಿದೆ. ಸಮ್ಮೇಳನದ ಕೋಶಾಧ್ಯಕ್ಷರೂ ಆದ ಜಿಲ್ಲಾಧಿಕಾರಿ ಅಧಿಕೃತ ವಿವರಣಾತ್ಮಕ ಲೆಕ್ಕಪತ್ರಗಳ ವರದಿಯ ಪತ್ರಿಯನ್ನು ಪಡೆಯಲು ಆರ್‌ಟಿಐ ಮೂಲಕ ಅರ್ಜಿ ಸಲ್ಲಿಸಿ ಪಡೆಯುವಂತೆ ಹೇಳಿದ್ದು, ಅರ್ಜಿ ಸಲ್ಲಿಸಲಾಗಿದೆ. ಆದರೆ ಸರ್ಕಾರದಿಂದ ಮಾತ್ರವಲ್ಲದೇ ದೇಣಿಗೆ ರೂಪದಲ್ಲಿಯೂ ಬಂದಿರುವ ಹಣದ ಮಾಹಿತಿ ಪಡೆಯಲು ಅರ್‌ಟಿಐ ಮೂಲಕ ಮಾಹಿತಿ ಪಡೆಯುವ ಅಗತ್ಯವಿದೆಯೇ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಸಾರ್ವಜನಿಕವಾಗಿ ತಿಳಿಸಬೇಕಾದ ಮಾಹಿತಿಯನ್ನು ಆರ್‌ಟಿಐ ಮೂಲಕ ಪಡೆಯುವಂತೆ ಹೇಳುವುದು ಎಷ್ಟು ಸರಿ?. ಕಸಾಪಗೆ ನೀಡಲಾದ 2.50 ಕೋಟಿ ರೂ ಲೆಕ್ಕವನ್ನು ತಾವು ನೀಡಿರುವ ಮುಖ್ಯ ವರದಿಯಲ್ಲಿ ನೀಡದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 2.50 ಕೋಟಿ ರೂಗಳ ಲೆಕ್ಕಪತ್ರವನ್ನು ಜಂಟಿಯಾಗಿ ಮಂಡಿಸಬೇಕು. ಕೋಶಾಧಿಕಾರಿ ಮಂಡಿಸಿದ ಮುಖ್ಯ ವರದಿಯ ವಿವರಣೆಯನ್ನು ಸಾರ್ವಜನಿಕಗೊಳಿಸಬೇಕು. ಇಲ್ಲವಾದಲ್ಲಿ ಕಾನೂನಾತ್ಮಹ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಎಂ.ಬಿ.ನಾಗಣ್ಣಗೌಡ, ಉಪನ್ಯಾಸಕ ರಾಜೇಂದ್ರ ಸಿಂಗ್, ಅರವಿಂದ್‌ಪ್ರಭು, ಸಂತೋಷ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net