ಸಹಸ್ರಾರ್ಜುನ ಮಹಾರಾಜರ ಮೂರ್ತಿ ಭವ್ಯ ಮೆರವಣಿಗೆ,  ಉತ್ಸವ ಸಮಿತಿ ವತಿಯಿಂದ ಸಂಭ್ರಮದ ಜಯಂತಿ ಆಚರಣೆ

IMG-20251029-WA0020-1.jpg
Published on

ಹುಬ್ಬಳ್ಳಿ: ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಶ್ರೀ ತುಳಜಾಭವಾನಿ ದೇವಸ್ಥಾನ, ಕೇಂದ್ರ ಪಂಚ ಸಮಿತಿ ಹಾಗೂ ಶ್ರೀ ಸಹಸ್ರಾರ್ಜುನ ಜಯಂತಿ ಉತ್ಸವ ಸಮಿತಿ ವತಿಯಿಂದ ಶ್ರೀ ರಾಜರಾಜೇಶ್ವರ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿ ಅಂಗವಾಗಿ ಬುಧವಾರ ಬೆಳಗ್ಗೆ ಸಮಾಜದ ಕುಲಪುರುಷ ರಾಜರಾಜೇಶ್ವರ ಶ್ರೀ ಸಹಸ್ರಾರ್ಜುನ ಮಹಾರಾಜರ ಬೆಳ್ಳಿ ಮೂರ್ತಿಯ ಭವ್ಯ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಇಲ್ಲಿಯ ದಾಜಿಬಾನಪೇಟ ಶ್ರೀ ತುಳಜಾಭವಾನಿ ಸರ್ಕಲ್ ನಲ್ಲಿರುವ ದೇವಸ್ಥಾನದಲ್ಲಿ ಪೂಜೆ, ಹೋಮ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನಡೆದವು. ನಂತರ ಸಹಸ್ರಾರ್ಜುನ ಮಹಾರಾಜರ ಬೆಳ್ಳಿ ಮೂರ್ತಿಯನ್ನು ಅಲಂಕೃತ ವಾಹನದಲ್ಲಿ ಪ್ರತಿಷ್ಠಾಪಿಸಿ ಅದ್ದೂರಿ ಮೆರವಣಿಗೆ ಮಾಡಲಾಯಿತು.

ವಿವಿಧ ವಾದ್ಯಮೇಳ, ಡಿಜೆ ಅಬ್ಬರಗಳ ಮಧ್ಯೆ ಸಮಾಜದ ಮುಖಂಡರು, ಜನರು ಸಾಂಪ್ರದಾಯಿಕ ಉಡುಗೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೆರಗು ತಂದರು.
ಬೆಳ್ಳಿ ಮೂರ್ತಿ ಮೆರವಣಿಗೆಗೆ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹಾಗೂ ಇತರ ಮುಖಂಡರು ಚಾಲನೆ ನೀಡಿದರು.

ಶ್ರೀ ಸಹಸ್ರಾರ್ಜುನ ಜಯಂತಿ ಉತ್ಸವ ಸಮಿತಿ ಸಂಚಾಲಕ ಸಾಯಿನಾಥ ದಲಭಂಜನ ನೇತೃತ್ವದಲ್ಲಿ ಭವ್ಯ ಮೆರವಣಿಗೆಯು ನಗರದಲ್ಲಿ ಸಂಚರಿಸಿತು. ಅತ್ಯಂತ ವ್ಯವಸ್ಥಿತ ಹಾಗೂ ಅಚ್ಚುಕಟ್ಟಾಗಿ ಮೆರವಣಿಗೆ ನಡೆಯಿತು.

ದಾರಿಯುದ್ದಕ್ಕೂ ಸಮಾಜದ ಜನರು ಬೆಳ್ಳಿ ಮೂರ್ತಿಯ ಮೆರವಣಿಗೆಗೆ ಹೂಮಳೆಗರೆದರು. ಭಕ್ತಿಯಿಂದ ನಮಿಸಿದರು.

ಸಮಾಜದ ಅಧ್ಯಕ್ಷ ಸತೀಶ ಮೆಹರವಾಡೆ, ಮಾಜಿ ಶಾಸಕ ಅಶೋಕ ಕಾಟವೆ, ವೆಂಕಟೇಶ ಕಾಟವೆ, ಶಶಿಕುಮಾರ ಮೆಹರವಾಡೆ, ವಿಠ್ಠಲ ಲದ್ವಾ, ಭಾಸ್ಕರ್ ಜಿತೂರಿ, ನೀಲಕಂಠಸಾ ಜಡಿ, ಎನ್.ಎನ್. ಖೋಡೆ, ಕೆ.ಪಿ. ಪೂಜಾರಿ, ಮೀರಾಬಾಯಿ ಮೆಹರವಾಡೆ, ಶೋಭಾ ನಾಕೋಡ, ಸರಳಾ ಭಾಂಡಗೆ, ರಾಜಶ್ರೀ ಜಡಿ, ಪ್ರೀತಿ ಖೋಡೆ, ವಿನಾಯಕ ಲದ್ವಾ, ರಂಗಾ ಬದ್ದಿ, ಕಾಶಿನಾಥ ಖೋಡೆ, ನಾರಾಯಣ ಜರತಾರರ, ಜಗನ್ನಾಥ ಕಠಾರೆ, ತುಳಸಿದಾಸ ಕಬಾಡಿ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net