ಸಿಂದಗಿಯಲ್ಲಿ ಲಲಿತಾ ಸಹಸ್ರನಾಮ, ಕೋಟಿ ಜಪಯಜ್ಞ

Lalita Sahasranama in Sindagi, Koti Japayajna
ಸಿಂದಗಿ ಪಟ್ಟಣದ ಹಳೆಯ ಬಜಾರ್‌ನಲ್ಲಿ ಪ್ರತಿಷ್ಠಾಪಿಸಿದ ಶ್ರೀದೇವಿ ಯುವಕ ಮಂಡಳಿ ನೇತೃತ್ವದಲ್ಲಿ ಲಲಿತಾ ಸಹಸ್ರನಾಮ, ಜಪಯಜ್ಞ ನಡೆಯಿತು.
Published on

ಸಿಂದಗಿ: ನಗರದ ಸಾತವೀರೇಶ್ವರ ಸಭಾಭವನದಲ್ಲಿ ಗುರುವಾರ ನವರಾತ್ರಿ ಅಚರಣೆಯ ಮೊದಲ ದಿನ ಸಾವಿರ ಮಹಿಳೆಯರು, ಯುವತಿಯರು ಹಾಗೂ ಮಕ್ಕಳು ಮಡಿ ಬಟ್ಟೆಯೊಂದಿಗೆ ವಿಶ್ವಶಾಂತಿ ಸಂಕಲ್ಪ ಕೈಗೊಂಡು ಶಕ್ತಿ ಮಾತೆಯ ತಾರಕಮಂತ್ರದ ಲಲಿತಾ ಸಹಸ್ರನಾಮ ಜಪವನ್ನು ನಿರರ್ಗಳವಾಗಿ ಪಾರಾಯಣ ಮಾಡಿದರು.

ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಕೋಟಿ ಜಪಯಜ್ಞಕ್ಕೆ ಚಾಲನೆ ನೀಡಿ ಮಾತನಾಡಿ, ವಿಶ್ವದಲ್ಲಿನ ಅಘಟಿತ ಕೃತ್ಯ, ಪ್ರಕೃತಿ ವಿಕೋಪದ ಘಾಸೀತನಕ್ಕೆ ಬಲಿಯಾಗುತ್ತಿರುವ ಮನುಷ್ಯರ ರಕ್ಷಣೆ ಹಾಗೂ ಶಾಂತಿ-ಸುಭಿಕ್ಷೆಗಾಗಿ ಭಗವಂತ ಹಾಗೂ ಶಕ್ತಿ ಮಾತೆಯ ಮೊರೆ ಹೋಗಬೇಕಿದೆ. ಈ ದಿಸೆಯಲ್ಲಿ ನಾವೆಲ್ಲರೂ ಧರ್ಮದ ಹಾದಿಯಲ್ಲಿ ಸಾಗಬೇಕಿದೆ ಎಂದರು.

ಅ.10 ರವರೆಗೆ ಸಾವಿರ ಸಹಸ್ರನಾಮಜಪ (ಹತ್ತು ಲಕ್ಷ ಜಪ) ದೊಂದಿಗೆ ಲಲಿತಾ ಸಹಸ್ರನಾಮ ಪಾರಾಯಣ, ಕೋಟಿ ಜಪಯಜ್ಞ ಕೈಗೊಳ್ಳಲಾಗಿದೆ. ಈ ಯಜ್ಞದಲ್ಲಿ ಪಾಲ್ಗೊಂಡ ಪ್ರತಿ ಹೆಣ್ಣು ಮಕ್ಕಳೂ ಭಾಗ್ಯವಂತರು ಎಂದರು.

ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ಕೊಣ್ಣೂರಿನ ಹೊರಗಿನ ಕಲ್ಯಾಣಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಪ್ರಶಾಂತ ಶಾಸಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net