

ಮೂಲ್ಕಿ: ಶ್ರೀ ಕಾಶೀಮಠಾಧೀಶ ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿ ಜನ್ಮ ಶತಾಬ್ಧ ಆಚರಣೆ ಪ್ರಯುಕ್ತ ಹರಿದ್ವಾರ ಶ್ರೀ ವ್ಯಾಸ ಮಂದಿರದಲ್ಲಿ 2025 ರ ಏಪ್ರಿಲ್ 10ರಿಂದ 12ರ ವರೆಗೆ ನಡೆಯಲಿರುವ ಸಹಸ್ರ ಚಂಡಿಕಾಯಾಗದ ಪೂರ್ವಭಾವಿಯಾಗಿ ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿ ಸನ್ಯಾಸತ್ವ ಸ್ವೀಕರಿಸಿದ ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ವಿಜಯೀಂದ್ರ ಮಂಟಪದಲ್ಲಿ ಗುರುವಾರ ಸಹಸ್ರ ಚಂಡಿಕಾ ಪಾರಾಯಣಕ್ಕೆ ಶ್ರೀ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರತೀರ್ಥ ಸ್ವಾಮೀಜಿ ಚಾಲನೆ ನೀಡಿದರು.
ವಿವಿಧ ಪುಣ್ಯ ಕ್ಷೇತ್ರಗಳಿಂದ ಆಗಮಿಸಿದ 300 ವೈದಿಕರಿಂದ ಗುರುಗಣಪತಿ ಪೂಜೆ ಹಾಗೂ ಸಹಸ್ರ ಚಂಡಿಕಾ ಪಾರಾಯಣ ಜರಗಿತು.
ಶ್ರೀ ಕ್ಷೇತ್ರದ ಅರ್ಚಕ ವರ್ಗ, ಆಡಳಿತ ಮಂಡಳಿ, ಮೂಲ್ಕಿ ಹತ್ತು ಸಮಸ್ತರು ಹಾಜರಿದ್ದರು.