ಸಾಮೂಹಿಕ ಸಹಸ್ರ ಬಿಲ್ವಾರ್ಚನೆ

03M.D.R.2
ಲೋಕ ಕಲ್ಯಾಣಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ಚೇತನಾ ಉದ್ಘಾಟಿಸಿದರು. ಸುರೇಶ್, ಎಂ.ಯಶವಂತ್, ಯೋಗೇಶ್, ಲಿಂಗೇಗೌಡ, ನಾಗೇಂದ್ರಶಾಸ್ತ್ರಿ ಇದ್ದರು.
Published on

ಮದ್ದೂರು: ಲೋಕ ಕಲ್ಯಾಣಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮವನ್ನು ಸೋಮವಾರ ಪಟ್ಟಣದ ಮದ್ದೂರಮ್ಮ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ಚೇತನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನೆ ಮನೆಗಳಲಿ ಎಲ್ಲರೂ ಈ ಆಚರಣೆ ಮಾಡುವುದರಿಂದ ಆರ್ಥಿಕ ಕಷ್ಟ ದೂರಾಗುತ್ತದೆ. ನಮ್ಮ ಧರ್ಮದ ಆಚರಣೆ ಒಂದು ಭಾಗವಾಗಿದ್ದು, ಇದು ನಮ್ಮ ಕರ್ತವ್ಯವಾಗಬೇಕು. ಸಾಮೂಹಿಕವಾಗಿ ಪೂಜೆ ಮಾಡಿದಾಗ ಸಮಾಜ ಕಲ್ಯಾಣವಾಗುತ್ತದೆ ಎಂದರು.

ತಾಲೂಕಿನ ಯೋಜನಾಧಿಕಾರಿ ಯೋಗೀಶ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೊಂದವರ ಬಾಳಿಗೆ ಬೆಳಕಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪುರಸಭೆ ಮಾಜಿ ಅಧ್ಯಕ್ಷ ಸುರೇಶ್, ಮದ್ದೂರಮ್ಮ ಯುವಕರ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಯಶ್ವಂತ್, ಜಿಲ್ಲಾ ಜನಜಾಗೃತಿ ನಿಕಟ ಪೂರ್ವ ಅಧ್ಯಕ್ಷ ಲಿಂಗೇಗೌಡ, ನಾಗೇಂದ್ರ ಶಾಸ್ತ್ರಿ, ವಲಯದ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net