

ಮೈಸೂರು: ಮಹಿಳಾ ಕ್ರಿಕೆಟ್‌ಪಟು ವಿಷಯದ ‘ಸಹಾರಾ’ ಸಿನಿಮಾ ಜೂನ್ 7 ರಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು, ಜನರು ಚಿತ್ರಮಂದಿರಕ್ಕೆ ಬಂದು ಚಿತ್ರ ವೀಕ್ಷಿಸುವ ಮೂಲಕ ಪ್ರೋತಾಹಿಸಬೇಕು ಎಂದು ನಟಿ ಸಾರಿಕಾ ರಾವ್ ಮನವಿ ಮಾಡಿದರು.
ಪುರುಷರ ಕ್ರಿಕೆಟ್‌ಗೆ ಹೆಚ್ಚು ಪ್ರಾಧಾನ್ಯತೆ ನೀಡಿ, ಮಹಿಳಾ ಕ್ರಿಕೆಟ್ ಕಡೆಗಣಿಸಲಾಗಿದೆ. ಹಾಗಾಗಿ, ಗ್ರಾಮೀಣ ಪ್ರದೇಶದ ಯುವತಿಯ ಕ್ರಿಕೆಟ್ ಸಾಧನೆ ಬಗ್ಗೆ ಚಿತ್ರ ಮಾಡಲಾಗಿದೆ. ಮಂಜೇಶ್ ಭಗವತ್ ನಿರ್ಮಾಣದ ಜತೆಗೆ ನಿರ್ದೇಶನ ಮಾಡಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.