ಯುವ ಜನತೆ ಸಹಕಾರದಲ್ಲಿ ಕ್ಷೇತ್ರ ಒಲವು ಬೆಳೆಸಿಕೊಳ್ಳಬೇಕು

udp-5-sahakari
Published on

ಉಡುಪಿ: ಕೇವಲ ಜಯಗಳಿಸುವುದೇ ಸ್ಪರ್ಧೆಯ ಉದ್ದೇಶವಾಗಿರಬಾರದು. ಭಾಗವಹಿಸುವಿಕೆ ಮುಖ್ಯ. ಮುಂದೆ ಉನ್ನತ ಉದ್ಯೋಗ ಪಡೆಯುವಲ್ಲಿ ಮಾತುಗಾರಿಕೆ ಉಪಯೋಗಕ್ಕೆ ಬರುತ್ತದೆ. ಯುವ ಜನತೆ ಸಹಕಾರ ಕ್ಷೇತ್ರದ ಕುರಿತು ಒಲವನ್ನು ಬೆಳೆಸಿಕೊಳ್ಳಬೇಕು, ಸ್ಥಳಿಯ ಸಹಕಾರ ಸಂಘಗಳಲ್ಲಿ ಸದಸ್ಯತ್ವವನ್ನು ಪಡೆದುಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್​ ಅಧ್ಯಕ್ಷ, ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಿ. ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.

ಮಂಗಳವಾರ ಜಿಲ್ಲಾ ಸಹಕಾರ ಯೂನಿಯನ್​ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ವೇದಿಕೆಯಲ್ಲಿ ಜಿಲ್ಲಾ ಸಹಕಾರಿ ಯೂನಿಯನ್​ ನಿರ್ದೇಶಕ ಶಂಕರ ಪೂಜಾರಿ ಕಟಪಾಡಿ, ತೀರ್ಪುಗಾರರಾಗಿ ಮೂಡಬಿದರೆ ಕೆ.ಐ.ಸಿ.ಎಂ ನ ಪ್ರಾಂಶುಪಾಲ ಡಾ. ವಿಶ್ವೇಶ್ವರಯ್ಯ, ನಿವೃತ್ತ ಸಹಾಯಕ ನಿಬಂಧಕ ನರಸಿಂಹ ಸ್ವಾಮಿ, ಜೆ.ಸಿ.ಐ ತರಬೇತಿದಾರ ರಾಘವೇಂದ್ರ ಪ್ರಭು ಕರ್ವಾಲು, ಉಪಸ್ಥಿತರಿದ್ದರು. ಮೂಡಬಿದರೆ ಕೆ.ಐ.ಸಿ.ಎಂ ಉಪನ್ಯಾಸಕಿ ಅನುಷಾ ಕೋಟ್ಯಾನ್​, ಬಡಗಬೆಟ್ಟು ಕ್ರೆಡಿಟ್​ ಕೋ-ಆಪರೇಟೀವ್​ ಸೊಸೈಟಿಯ ಶಾಖಾ ವ್ಯವಸ್ಥಾಪಕ ಪ್ರವಿಣ್​ ಕುಮಾರ್​ ಉಪಸ್ಥಿತರಿದ್ದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಕೋಡಿಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ಸಹಕಾರಿ ಯೂನಿಯನ್​ ವ್ಯವಸ್ಥಾಪಕ ವಿಶ್ವನಾಥ್​ ಅಮೀನ್​ ಹಾಗೂ ಅರುಣ್​ ಕುಮಾರ್​ , ಸಿಬ್ಬಂದಿ ಸ್ವಪ್ನಾ ರಾವ್​ ಸಹಕರಿಸಿದರು.

ಬಹುಮಾನ ವಿಜೇತರು
ಬಡತನ ನಿಮೂರ್ಲನೆ ,ಉದ್ಯೋಗ ಸೃಷ್ಟಿ, ಸಾಮಾಜಿಕ ನ್ಯಾಯ ವಿತರಣೆಗಳು ಸಹಕಾರಿ ವಲಯದಿಂದ ಮಾತ್ರವೇ ಜಾರಿಗೊಳಿಸಲು ಸಾಧ್ಯ" ೆ" ಎಂಬ ವಿಷಯದ ಕುರಿತು ಉಡುಪಿ ಜಿಲ್ಲೆಯ ಪದವಿ ಪೂರ್ವ ಕಾಲೇಜು ವಿಧ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಚರ್ಚಾಸ್ಪರ್ಧೆಯಲ್ಲಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು ಅದಮಾರು ದ್ವೀತಿಯ ಪಿ.ಯು.ಸಿ ವಿದ್ಯಾರ್ಥಿನಿ ದಕ್ಷಾ ಜೆ. ಶೆಟ್ಟಿ ವಿಷಯದ ಪರವಾಗಿ ಪ್ರಥಮ ಸ್ಥಾನ, ಎಂ.ಜಿ.ಎಂ ಕಾಲೇಜು ಪ್ರಥಮ ಪಿ.ಯು.ಸಿ ವಿದ್ಯಾರ್ಥಿನಿ ದಿವ್ಯ ವಿಷಯದ ವಿರೋಧವಾಗಿ ಪ್ರಥಮ ಸ್ಥಾನವನ್ನು ಪಡೆದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಡೆಸುವ ರಾಜ್ಯ ಮಟ್ಟದ ಸಹಕಾರ ಚರ್ಚಾ ಸ್ಫರ್ಧೆಗೆ ಆಯ್ಕೆಯಾಗಿದ್ದಾರೆ. ಶಂಕರ ನಾರಾಯಣ ಮದರ್​ ತೆರೆಸಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ನಿಶಾ ನಾರಾಯಣ ತೋಳಾರ್​ ಹಾಗೂ ಕೋಟ ವಿವೇಕ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಪ್ರೀತಿ ದ್ವೀತಿಯ ಸ್ಥಾನ ಪಡೆದಿದ್ದಾರೆ.

'ರಾಷ್ಟ್ರದ ಅರ್ಥ ವ್ಯವಸ್ಥೆಯ ಬೆಳವಣಿಗೆಗಳಲ್ಲಿ ಸಹಕಾರಿ ವಲಯದ ಪಾತ್ರ "" ಎಂಬ ವಿಷಯದ ಕುರಿತು ಜಿಲ್ಲೆಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಕುಚ್ಚೂರು ಹೆರ್ಗ ವಿಠಲ ಶೆಟ್ಟಿ ಸರಕಾರಿ ಪ್ರೌಢ ಶಾಲೆ 10 ನೇ ತರಗತಿ ವಿದ್ಯಾರ್ಥಿನಿ ಶ್ರೇಯಾ ಪ್ರಥಮ ಸ್ಥಾನ, ಕಲ್ಯಾ ಸರ್ಕಾರಿ ಪ್ರೌಢ ಶಾಲೆ 10 ನೇ ತರಗತಿ ವಿದ್ಯಾರ್ಥಿ ಮಿಥುನ್​ ದ್ವೀತಿಯ ಸ್ಥಾನ, ಮುದ್ರಾಡಿ ಎಂ.ಎನ್​.ಡಿ.ಎಸ್​.ಎಂ ಅನುದಾನಿತ ಹೈಸ್ಕೂಲ್​ 10 ನೇ ತರಗತಿ ವಿದ್ಯಾರ್ಥಿನಿ ಅನುಶ್ರೀ ತೃತೀಯ ಸ್ಥಾನವನ್ನು ಪಡೆದು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net