

ಮಂಡ್ಯ: ಮಾಜಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಹಿರಿಯ ಸಹಕಾರಿ ಕೀಲಾರ ಕೃಷ್ಣ ಅವರಿಗೆ ರಾಜ್ಯ ಸಹಕಾರ ಮಹಾಮಂಡಳ ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಮಹಾಮಂಡಳದ ವತಿಯಿಂದ ನ.14ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆ0ುುವ ಸಮಾರಂಭದಲ್ಲಿ ಕೆ. ಕೃಷ್ಣ (ಕೀಲಾರ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಕೃಷ್ಣ ಅವರು ಕೆ.ವಿ. ಶಂಕರಗೌಡ ಅವರ ಹುಟ್ಟೂರಾದ ಕೀಲಾರ ಗ್ರಾಮದವರು. 1952 ಸೆಪ್ಟಂಬರ್ 3ರಂದು ಜನಿಸಿದವರು. ಬಿ.ಎ. ಪದವೀಧರರಾದ ಇವರು ಸಹಕಾರ ಕ್ಷೇತ್ರದಲ್ಲಿ ಅವಿರತವಾಗಿ ಶ್ರಮಿಸಿದವರು. ಕೀಲಾರ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಿಂದ ಆರಂಭಿಸಿ ಮಂಡ್ಯ ಜಿಲ್ಲಾ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾಗಿ, ಮೈಷುಗರ್ ಸಕ್ಕರೆ ಕಾರ್ಖಾನೆ0ು ನಿರ್ದೇಶಕರಾಗಿ, ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕರಾಗಿ, ಸಿಟಿ ಕೋ-ಆಪರೇಟಿವ್ ಬ್ಯಾಂಕ್‌ನ ನಿರ್ದೇಶಕರಾಗಿ ಅವರಥ ಸೇವೆ ಸಲ್ಲಿಸಿದವರು. ಇವರ ಸಹಕಾರಿ ಕ್ಷೇತ್ರದ ಹಿರಿತನವನ್ನು ಪರಿಗಣಿಸಿ ರಾಜ್ಯ ಸರ್ಕಾರ ಸಹಕಾರ ರತ್ನ ಪ್ರಶಸ್ತಿ0ುನ್ನು ನೀಡಿ ಗೌರವಿಸುತ್ತಿದೆ.