ಎಸ್.ನಾಗರಾಜು ಜಿಲ್ಲಾ ಸಹಕಾರ ಭಾರತಿ ಅಧ್ಯಕ್ಷ

1 (8)
Published on

ಮಂಡ್ಯ: ಜಿಲ್ಲಾ ಸಹಕಾರಿ ಭಾರತಿ ಅಧ್ಯಕ್ಷರಾಗಿ ಜಗಜ್ಯೋತಿ ಬಸವೇಶ್ವರ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಜಿಲ್ಲಾಧ್ಯಕ್ಷ ಎಸ್.ನಾಗರಾಜು ಆಯ್ಕೆಯಾಗಿದ್ದಾರೆ.

ನಗರದ ಕಮಲಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಜಿಲ್ಲಾ ಉಪಾಧ್ಯಕ್ಷರಾಗಿ ಮಹೇಂದ್ರಬಾಬು, ಟಿ.ಕುಮಾರ್, ಸಿದ್ದಲಿಂಗಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಸಿಪಾಯಿ ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿಯಾಗಿ ನಿತಿನ್, ಖಜಾಂಚಿಯಾಗಿ ಶರತ್, ಕಾರ್ಯಕಾರಿಣಿ ಸದಸ್ಯರಾಗಿ ಅನಿಲ್, ಯೋಗೇಶ್ ಕೆರಗೋಡು, ಗುರುರಾಜಶೆಟ್ಟಿ, ತಿರುಮಲಚಾರ್, ಸಾರಂಗಿ ನಾಗರಾಜ್, ಮಹಿಳಾ ಪ್ರಮುಖ್ ಆಗಿ ರಾಜೇಶ್ವರಿ, ಸಹ ಪ್ರಮುಖ್ ಸವಿತಾ ಬಸವರಾಜ್, ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ತೇಜಸ್ ಮತ್ತು ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್ ಮಂಡ್ಯ ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net