

ಮಹಾಲಿಂಗಪುರ: ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಶ್ರೀಗಳು ಅಧ್ಯಾತ್ಮ ಕ್ಷೇತ್ರದ ನಡೆದಾಡುವ ವಿಶ್ವವಿದ್ಯಾಲಯ ಇದ್ದಂತೆ. ಅವರ ಸನ್ನಿಧಿಯಲ್ಲಿ ಅಧ್ಯಾತ್ಮ ಸಾಧನೆ ಮಾಡಿದವರೇ ಧನ್ಯರು ಎಂದು ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಇತ್ತೀಚೆಗೆ ನಡೆದ 191ನೇ ಸಿದ್ಧಾರೂಢರ ವಾರದ ಸತ್ಸಂಗ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಹಜಾನಂದ ಶ್ರೀಗಳು ಕಲಿತದ್ದು 4ನೇ ತರಗತಿಯಾದರೂ ನಾಡಿನ ಶ್ರೇಷ್ಠ ಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ. ಹಿಂದಿಯಿಂದ ಕನ್ನಡಕ್ಕೆ ಅನುವಾದ, ಭಾಮಿನಿ ಷಟ್ಪದಿ ಸೇರಿ 25ಕ್ಕೂ ಅಧಿಕ ಅಮೂಲ್ಯವಾದ ಅಧ್ಯಾತ್ಮ ಗ್ರಂಥಗಳನ್ನು ರಚಿಸಿ, ನಾಡಿನ ಅಧ್ಯಾತ್ಮಪ್ರಿಯರಿಗೆ ಮಹದುಪಕಾರ ಮಾಡಿದ್ದಾರೆ. 83ರ ಇಳಿ ವಯಸ್ಸಿನಲ್ಲಿಯೂ ಬರವಣಿಗೆ, ಭಗವತ್ ಚಿಂತನ ಸಾಧನ ಶಿಬಿರ, ಪ್ರವಚನಗಳ ಮೂಲಕ 45 ವರ್ಷಗಳಿಂದ ಅಧ್ಯಾತ್ಮ ಸಾಧನೆಯಲ್ಲಿರುವುದು ಶ್ಲಾಘನೀಯ ಎಂದರು.
ಪೀಠಾಧಿಪತಿ ಸಹಜಾನಂದ ಸ್ವಾಮೀಜಿ, ಖಜ್ಜಿಡೋಣಿಯ ಕೃಷ್ಣಾನಂದ ಶಾಸೀಜಿ, ಹೊಸೂರ ಪರಮಾನಂದ ಸ್ವಾಮೀಜಿ, ಮಲ್ಲೇಶಪ್ಪ ಕಟಗಿ ಶರಣರು, ಸಿದ್ಧಾನಂದ ಭಾರತಿ ಸ್ವಾಮೀಜಿ ಸಿದ್ಧಾರೂಢರ ಚರಿತ್ರೆಯಾಧರಿಸಿ ಮಾತನಾಡಿದರು.
ಕುಮಾರ ಚಿದಾನಂದ ಚಿಲಮಿ ದಾಸೋಹ ಏರ್ಪಡಿಸಿದ್ದರು.
ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಸಿದ್ದಾರೂಢ ಟ್ರಸ್ಟ್ ಕಮಿಟಿ ಸದಸ್ಯರಾದ ಡಾ. ಬಿ.ಡಿ. ಸೋರಗಾಂವಿ, ಮಲ್ಲಪ್ಪ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಚಂದ್ರಶೇಖರ ಮೋರೆ, ಚೇತನ ಹಾದಿಮನಿ, ಸದ್ಭಕ್ತರಾದ ಎಸ್.ಕೆ. ಗಿಂಡೆ, ಚನ್ನಪ್ಪ ಪಟ್ಟಣಶೆಟ್ಟಿ, ಮಹೇಶ ಇಟಕನ್ನವರ, ಮಹಾಲಿಂಗ ಕರೆಹೊನ್ನ, ಸಿದ್ದರಾಮಯ್ಯ ಗೋಠೆ, ಚನಬಸು ಹುರಕಡ್ಲಿ, ಶೇಖರ ಮರೆಗುದ್ದಿ, ಎಂ. ಗುಡ್ಡಪ್ಪ, ಸಿದ್ದು ದಢೂತಿ, ಮಲ್ಲಪ್ಪ ಯಾದವಾಡ, ಚನ್ನಪ್ಪ ಚಂಡೋಲ, ಚನ್ನಪ್ಪ ಗುಗಾಡ, ಶಿವಾನಂದ ತೇಲಿ, ಕುಮಾರ ಉಳ್ಳಾಗಡ್ಡಿ, ಹಣಮಂತ ಮೀರಾಪಟ್ಟಿ ಇತರರಿದ್ದರು.