ನವಗ್ರಹ ಕ್ಷೇತ್ರಕ್ಕೆ ಆಗಮಿಸುತ್ತಿರುವ ಮುನಿಗಳು

New Varur New
Published on

ಹುಬ್ಬಳ್ಳಿ : ಸಮೀಪದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ 2025ರ ಜನವರಿಯಲ್ಲಿ ಆಯೋಜಿಸಿರುವ ನವ ತೀರ್ಥಂಕರರ ದ್ವಿತೀಯ ಮಹಾಮಸ್ತಕಾಭಿಷೇಕ ಹಾಗೂ 405 ಅಡಿ ಎತ್ತರದ ಸುಮೇರು ಪರ್ವತ ಲೋಕಾರ್ಪಣೆ, ಜಿನಬಿಂಬಗಳ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದಕ್ಕಾಗಿ ದೇಶದ ವಿವಿಧೆಡೆಯಿಂದ ಮುನಿಗಳು ಆಗಮಿಸುತ್ತಿದ್ದಾರೆ.

ಮುನಿಶ್ರೀ ಪುಣ್ಯಸಾಗರ ಮಹಾರಾಜರು ಭಾನುವಾರ ನವಗ್ರಹ ತೀರ್ಥಕ್ಷೇತ್ರ ಪ್ರವೇಶಿಸಿದರು. ಆಚಾರ್ಯ ಶ್ರೀ ಪದ್ಮನಂದಿ ಮಹಾರಾಜರು ಮತ್ತೊಬ್ಬ ಮುನಿಶ್ರೀ ಹಾಗೂ ಮಾತಾಜಿ ತಂಡದೊಂದಿಗೆ ಸೋಮವಾರದಂದು ಹುಬ್ಬಳ್ಳಿಗೆ ಆಗಮಿಸಿದರು. ಜ. 1ರಂದು ಬೆಳಗ್ಗೆ ಮುನಿಗಳ ತಂಡವು ನವಗ್ರಹ ತೀರ್ಥಕ್ಷೇತ್ರ ತಲುಪಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net