ಗೋಕರ್ಣದಲ್ಲಿ ಬ್ರಹ್ಮ ಋಷಿ ದೈವರಾತ ಜಯಂತಿ ನಾಳೆ

GOKARNA
Published on

ಗೋಕರ್ಣ: ಇಲ್ಲಿನ ಅಶೋಕವನದಲ್ಲಿರುವ ಸಸ್ಯ ಸಂಜೀವಿನಿ ಪಂಚಕರ್ಮ ಕೇಂದ್ರ ಸಭಾಂಗಣದಲ್ಲಿ ಮಂತ್ರ ದೃಷ್ಟಾರ ಬ್ರಹ್ಮ ಋಷಿ ದೈವರಾತರ 132ನೇ ಜಯಂತ್ಯುತ್ಸವ ಜ. 15ರಂದು ಏರ್ಪಾಟಾಗಿದೆ.

ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಅಂದು ಬೆಳಗ್ಗೆ 10.30ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಆಯುಷ್ ಇಲಾಖೆ ಪ್ರಾಚಾರ್ಯ ಡಾ. ಸತ್ಯನಾರಾಯಣ ಭಟ್ಟ ಪಿ., ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಜಿ.ಎಲ್. ಹೆಗಡೆ, ಸ್ತ್ರೀರೋಗ ತಜ್ಞ ಡಾ.ಜಿ.ಜಿ. ಹೆಗಡೆ, ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆಡಳಿತಾಧಿಕಾರಿ ಡಾ.ಪ್ರಸನ್ನಕುಮಾರ, ಪ್ರಾಧ್ಯಾಪಕಿ ಡಾ.ಕವಿತಾ ಮತ್ತು ಆಯುರ್ವೆದ ಚಿಕಿತ್ಸಕ ಡಾ.ಲಿಖಿತ್ ಡಿ. ರಾಜು ಪಾಲ್ಗೊಳ್ಳುವರು.

ಜನಪದ ವೈದ್ಯ ವೇದಶ್ರವ ಶರ್ಮ ಅಧ್ಯಕ್ಷತೆ ವಹಿಸುವರು. ಜಯಂತಿ ನಿಮಿತ್ತ ಸನ್ಮಾನ ಕಾರ್ಯಕ್ರಮ, ಉಚಿತ ಆಯುರ್ವೆದ ಮತ್ತು ದಂತ ಚಿಕಿತ್ಸಾ ಶಿಬಿರ ಏರ್ಪಾಟಾಗಿದೆ. ಕಾರ್ಯಕ್ರಮದಲ್ಲಿ ವೇದಶ್ರವ ಶರ್ಮ ಬರೆದ ‘ಮನೋಗಾತ’ ಮತ್ತು ‘ಪ್ರಾಚೀನ ವಿಜ್ಞಾನ’ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ಸಮಸ್ತ ದೈವರಾತ ಕುಟುಂಬದ ವತಿಯಿಂದ ಡಾ. ಪತಂಜಲಿ ಶರ್ಮ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net