ಸಾಗರದಿಂದ ಸ್ಪರ್ಧೆ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ, ಕಾಗೋಡು ತಿಮ್ಮಪ್ಪ

kagodu thimmappa
Published on

ಶಿವಮೊಗ್ಗ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಾಗರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ. ನಾನು ಸ್ಪರ್ಧೆ ಮಾಡಬೇಕೋ ಬೇಡವೋ ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಭಾವಿಕವಾಗಿ ನಾನೂ ಸಾಗರ ಕ್ಷೇತ್ರದಿಂದ ಅರ್ಜಿ ಹಾಕಿದ್ದೇವೆ. ಆಸಕ್ತಿ ಇರುವುದರಿಂದ ನನ್ನ ಮಗಳು ಡಾ. ರಾಜನಂದಿನಿ ಕೂಡ ಅರ್ಜಿ ಹಾಕಿದ್ದಾರೆ. ಹಾಗಂದ ಮಾತ್ರಕ್ಕೆ ಕುಟುಂಬದಲ್ಲೇ ಸ್ಪರ್ಧೆ(ಕಾಂಪಿಟೇಶನ್) ಇದೆ ಎಂದರ್ಥವಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಚುನಾವಣೆಗೆ ಸ್ಪರ್ಧೆ ಮಾಡುವ ಹಕ್ಕಿದೆ ಎಂದರು.

ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡವರು ಸಹಜವಾಗಿ ನಾಯಕನಾಗಿ ಗುರುತಿಸಿಕೊಳ್ಳುತ್ತಾರೆ. ಹಾಗೆಯೇ ಸಾಗರ ಕ್ಷೇತ್ರದಿಂದ ಬಹಳಷ್ಟು ಆಕಾಂಕ್ಷಿಗಳು ಇರಬಹುದು. ಅವರವರ ಸಾಮರ್ಥ್ಯದ ಮೇಲೆ ಟಿಕೆಟ್ ಸಿಗಲಿದೆ. ಕಳೆದ ಬಾರಿಯೇ ಇದು ನನ್ನ ಕೊನೆ ಚುನಾವಣೆ ಎಂದಿದ್ದೆ. ಅವಿರೋಧವಾಗಿಯೂ ಸ್ಪರ್ಧೆ ಮಾಡಿದ್ದೆ. ಆದರೆ ಜನರು ನನ್ನನ್ನು ಸೋಲಿಸಿದರು. ಹಾಗಾಗಿ ನಾನು ಸ್ಪರ್ಧಿಸುವ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಅಡ್ಡಗೋಡೆ ಮೇಲೆ ಅಡ್ಡದೀಪವಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net