

ಸಾಗರ: ದೇಶಿ ಸೇವಾ ಪ್ರತಿಷ್ಠಾನದ ಸದಸ್ಯರು ಶುಚಿತ್ವವಿಲ್ಲದೆ ಗಬ್ಬು ವಾಸನೆ ನಾರುತ್ತಿದ್ದ ನಗರದ ನೆಹರು ಮೈದಾನವನ್ನು ಸಾರ್ವಜನಿಕರ ಜತೆ ಸೇರಿ ಸ್ವಚ್ಛಗೊಳಿಸಿದರು. ಶ್ರೀಧರಮೂರ್ತಿ ನೇತೃತ್ವದಲ್ಲಿ ಶುಕ್ರವಾರ ಕಸ, ಪ್ಲಾಸ್ಟಿಕ್ ಬಾಟಲ್ಸ್, ಊಟ, ತಿಂಡಿ ಮಾಡಿ ಬಿಸಾಕಿದ್ದ ಪ್ಲೇಟ್‌ಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು. ಇನ್ನಾದರೂ ನಗರಸಭೆ ಅಧಿಕಾರಗಳು ನೆಹರು ಮೈದಾನವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರಲ್ಲದೆ ಸಾರ್ವಜನಿಕರು ಕೂಡ ಪಾಕ್‌ರ್ರ್ಗಳಲ್ಲಿ, ಮೈದಾನದ ಎಲ್ಲೆಂದರಲ್ಲಿ ಕುಡಿದು, ತಿಂದ ಪ್ಲಾಸ್ಟಿಕ್ ಬಾಟಲಿ, ತಟ್ಟೆಗಳನ್ನು ಕಸದ ತೊಟ್ಟಿಗೆ ಹಾಕುವ ಮನೋ ಪ್ರವೃತ್ತಿ ಬಳಸಿಕೊಳ್ಳಬೇಕು ಎಂದು ಜಾಗೃತಿ ಮೂಡಿಸಿದರು. ನಿವೃತ್ತ ಶಿಕ್ಷಕಿ ಡಿ.ಸರೋಜಾ, ಐ.ಬಿ.ಪಟಗಾರ, ಮಹಾಬಲೇಶ್ವರ ಶೇಟ್, ಶ್ರೀಕಾಂತ್ ನಾಯಕ್, ರಾಘವೇಂದ್ರ ಮಾಲ್ವೆ, ಪ್ರಸಾದ್ ರಾವ್, ಸುಧೀರ್, ರಾಧಾಕೃಷ್ಣ, ಅಶ್ಫಾಕ್ ಅಹಮದ್, ಹರ್ಷಕುಮಾರ್, ಸಾರ್ವಜನಿಕರು ಶ್ರಮದಾನ ಮಾಡಿದರು.