

ಗಲಗಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಹಿನ್ನೆಲೆಯಲ್ಲಿ ಹೋಬಳಿಮಟ್ಟದ ಭವ್ಯ ಪಥ ಸಂಚಲನ ಶನಿವಾರ ಸಂಜೆ ನಡೆಯಿತು.
ಪಥ ಸಂಚಲನ ಸಂಚರಿಸುವ ಮಾರ್ಗದೂದ್ದಕ್ಕೂ ಕಟೌಟ್, ಭಗವಾ ಧ್ವಜ ರಾರಾಜಿಸಿದವು. ವಿವಿಧೆಡೆ ರಂಗೋಲಿ ಬಿಡಿಸಿ ಶೃಂಗರಿಸಲಾಗಿತ್ತು. ಸಾರ್ವಜನಿಕರು ಗಣವೇಷಧಾರಿಗಳಿಗೆ ಹೂ ಮಳೆಗೈದು ಸ್ವಾಗತಿಸಿದರು.
ಅಂಬೇಡ್ಕರ್ ಸರ್ಕಲ್, ಬಸ್ ನಿಲ್ದಾಣ, ಸಾವರ್ಕರ್ ಸರ್ಕಲ್, ಐಬಿ ರಸ್ತೆ, ಕುಂಬಾರ ಓಣಿ, ಮಲ್ಲಿಕಾರ್ಜುನ ದೇವಸ್ಥಾನ ಸೇರಿ ವಿವಿಧ ರಸ್ತೆಗಳ ಮೂಲಕ ಕೆಇಬಿ ರಸ್ತೆ ಮುಖಾಂತರ ಹೇಮ-ವೇಮ ಶಾಲೆಯ ಮೈದಾನದಲ್ಲಿ ಪಥಸಂಚಲನ ಸಂಪನ್ನಗೊಂಡಿತು.