ಸಿರಿಗೇರಿ: ಗ್ರಾಮದ ಕಿರಾಣಿ ಅಂಗಡಿ ವರ್ತಕಿ ನರಸಮ್ಮ ಅವರಿಗೆ ಕುಂಕುಮ ಕೊಟ್ಟ ಅಪರಿಚಿತರು 30 ಸಾವಿರ ರೂ. ಮೌಲ್ಯದ 10ಗ್ರಾಂ ಚಿನ್ನದ ಸರ ಎಗರಿಸಿದ ಘಟನೆ ಗುರುವಾರ ನಡೆದಿದೆ. ಗಿರಾಕಿಯ ಸೋಗಿನಲ್ಲಿ ಬಂದು ಇಬ್ಬರು ಕುಂಕುಮ ಕೊಡಲು ಕೇಳಿದ್ದಾರೆ. ಕುಂಕುಮ ಕೊಟ್ಟ ನಂತರ ಮಂಪರು ಬಂದಂತೆ ಆಗಿದೆ ಈ ಸಮಯದಲ್ಲಿ ಕತ್ತಿನಲ್ಲಿದ್ದ ಚಿನ್ನದ ಸರ ಪೂಜೆ ಮಾಡುತ್ತೇವೆ ಎಂದು ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸಿರಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.