ಗುಮ್ಮಟನಗರಿಯಲ್ಲಿ ಕೇಸರಿ ಕಲರವ, ಜೈ ಶ್ರೀರಾಮ್ ಘೋಷಣೆ..

Flag 1
Published on

ವಿಜಯಪುರ: ಐತಿಹಾಸಿಕ ನಗರಿಯಲ್ಲಿ ಭಾನುವಾರ ಸ್ವಾತಂತ್ರ್ಯ ಹೋರಾಟಗಾರರ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಡೆದ ಬೃಹತ್ ಮೆರವಣಿಗೆ ಗಮನ ಸೆಳೆಯಿತು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನೇತೃತ್ವದಲ್ಲಿ ವಿಜಯಪುರದ ಗೋದಾವರಿ ಹೊಟೇಲ್ ಬಳಿ ಏಳು ಮೂರ್ತಿಗಳ ಮೆರವಣಿಗೆಗೆ ರಾಜ್ಯ ಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಉದಯಸಿಂಗ್ ಚಾಲನೆ ನೀಡಿದರು.

ವೀರ ಮಹಾರಾಣಾ ಪ್ರತಾಪ್ ಸಿಂಗ್, ಸರ್ದಾರ ವಲ್ಲಭಬಾಯ್ ಪಟೇಲ್, ವೀರ ಸಾವರಕರ್, ಲಾಲ್​ಬಹದ್ದೂರ್ ಶಾಸ್ತ್ರಿ, ಸ್ವಾಮಿ ವಿವೇಕಾನಂದ, ರಾಜಮಾತಾ ಅಹಿಲ್ಯಾಬಾಯಿ ಹೋಳ್ಕರ್, ನೇತಾಜಿ ಸುಭಾಸಚಂದ್ರ ಬೋಸ್ ಅವರ ಮೂರ್ತಿಗಳು ರಾರಾಜಿಸಿದವು.

ಡೊಳ್ಳು‌ ಕುಣಿತ, ಬಂಜಾರಾ ಸಮುದಾಯದ ವೇಷ ಧರಿಸಿದ ಮಹಿಳಾ ತಂಡ, ಹಲಗೆ ಮೇಳ ತಂಡಗಳು ಮೆರವಣಿಗೆಗೆ ಮೆರುಗು ತಂದವು. ಕೇಸರಿ ಧ್ವಜ ಹಿಡಿದ ಯುವಕರು ಡಿಜೆ ಸೌಂಡ್​ಗೆ ಹೆಜ್ಜೆ ಹಾಕುತ್ತ ಜೈಶ್ರೀರಾಮ್ ಘೋಷಣೆ ‌ಕೂಗಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net