ಎಲ್ಲೆಲ್ಲೂ ಕೇಸರಿ ಅಲಂಕಾರ

Koppa ddd
ಕೊಪ್ಪ ಬಸ್ ನಿಲ್ದಾಣದಲ್ಲಿ ಬಜರಂಗದಳದ ಕಾರ್ಯಕರ್ತರು ಕೇಸರಿ ಬಂಟಿಂಗ್ಸ್‌ನಿಂದ ಅಲಂಕಾರ ಮಾಡಿರುವುದು.
Published on

ಕೊಪ್ಪ: ಅಯೋಧ್ಯೆಯಲ್ಲಿ ಬಾಲರಾಮ ಪ್ರಾಣಪ್ರತಿಷ್ಠೆ ಹಿನ್ನೆಲ್ಲೆಯಲ್ಲಿ ತಾಲೂಕಿನ ಎಲ್ಲೆಡೆ ಕೇಸರಿ ಬಾವುಟ, ಬಂಟಿಂಗ್ಸ್‌ನಿಂದ ಅಲಂಕಾರ ಮಾಡಲಾಗಿದೆ. ಮನೆಗಳಲ್ಲಿ ರಾಮನ ಚಿತ್ರವಿರುವ, ಜೈ ಶ್ರೀರಾಮ್, ಓಂ ಇನ್ನಿತರ ಕೇಸರಿ ಬಾವುಟವನ್ನು ಹಾರಿಸಲಾಗಿದೆ. ಪಟ್ಟಣದ ಬಸ್ ನಿಲ್ದಾಣವನ್ನು ಕೇಸರಿ ಬಂಟಿಂಗ್ಸ್‌ನಿಂದ ಅಲಂಕಾರ ಮಾಡಲಾಗಿದೆ. ಪಟ್ಟಣದ ಅಂಗಡಿಗಳಲ್ಲಿ ವರ್ತಕರು ಸ್ವಯಂ ಪ್ರೇರಿತವಾಗಿ ಕೇಸರಿ ಬಟ್ಟೆ, ಧ್ವಜ, ಬ್ಯಾನರ್‌ಗಳಿಂದ ಅಲಂಕಾರ ಮಾಡಿದ್ದಾರೆ.

ಗ್ರಾಮಗಳಲ್ಲಿ ದೀಪೋತ್ಸ ನಡೆಸಲಾಗುತ್ತಿದೆ. ಹಲವು ಕಡೆ ಅಯೋಧ್ಯೆಯ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ನೇರ ಪ್ರಸಾರ ವಿಕ್ಷೀಸಲು ವ್ಯವಸ್ಥೆ ಮಾಡಲಾಗಿದೆ.
ಹುಲ್ಲುಮಕ್ಕಿ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಜ.22ರ ಬೆಳಗ್ಗೆ 9 ಗಂಟೆಯಿಂದ ಶ್ರೀರಾಮ ತಾರಕ ಹೋಮ, ಆಂಜನೇಯ ಅಭಿಷೇಕ, ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net