ಮಾಗಡಿಯಲ್ಲಿ ಕುಸುಬೆ ಬೆಳೆ ಕ್ಷೇತ್ರೋತ್ಸವ

31 SRT-1
Published on

ಶಿರಹಟ್ಟಿ: ಕೃಷಿ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳಾಗುತ್ತಿದ್ದು, ರೈತರು ಆಧುನಿಕ ಕೃಷಿಯತ್ತ ಒಲವು ತೋರಬೇಕಾದರೆ ಅವರಿಗೆ ಸುಧಾರಿತ ತಳಿಗಳನ್ನು ಪರಿಚಯಿಸಬೇಕು ಎಂದು ಹೈದರಾಬಾದ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಪಿ. ಕದ್ರಿವೆಲ್ ಅಭಿಪ್ರಾಯಪಟ್ಟರು.
ಇಂಡಿಯನ್ ಆಯಿಲ್ ರಿಸರ್ಚ್ ಸೆಂಟರ್, ಧಾರವಾಡ ಕೃಷಿ ವಿವಿ ಸಹಯೋಗದಲ್ಲಿ ತಾಲೂಕಿನ ಮಾಗಡಿ ಗ್ರಾಮದ ರೈತ ಅಶೋಕ ಕೋಳಿವಾಡ ಹೊಲದಲ್ಲಿ ಮಂಗಳವಾರ ಏರ್ಪಡಿಸಿದ್ದ ಕುಸುಬೆ ಬೆಳೆ ಕ್ಷೇತ್ರೋತ್ಸವ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರು ವಿದ್ಯಾವಂತರಾಗಬೇಕು. ಸರ್ಕಾರದ ಯೋಜನೆಗಳ ಮಾಹಿತಿ ಪಡೆಯುವ ಮೂಲಕ ಬೇಸಾಯಯಲ್ಲಿ ಬದಲಾವಣೆ ತಂದುಕೊಳ್ಳಬೇಕು ಎಂದು ಸಲಹೆ ನೀಡಿದರು.
ತೆಲಂಗಾಣದ ಬೇಸಾಯ ತಜ್ಞ ಮುಖ್ಯ ಕೃಷಿ ವಿಜ್ಞಾನಿ ಡಾ.ಸಿ.ಸುಧಾಕರ ಮಾತನಾಡಿ, ಬೆಳೆದಂಥ ಬೆಳೆಯ ಮೌಲ್ಯವರ್ಧನೆ ಮಾಡಿ, ಅವುಗಳನ್ನು ಆಹಾರ ಪದಾರ್ಥಗಳ ರೂಪದಲ್ಲಿ ಮಾರಾಟ ಮಾಡಿದರೆ ನಿಗದಿತ ಬೆಲೆ ಪಡೆಯಬಹುದು ಎಂದರು. ಅಣ್ಣಿಗೇರಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸಂಗಶೆಟ್ಟಿ ಬಾಲ್ಕುಂಡೆ, ಡಾ.ಬಿ.ಎನ್. ಮೊಟಗಿ ಮಾತನಾಡಿದರು. ಡಾ. ಡಿ.ಆರ್. ಮುರುಮಕರ, ಡಾ.ಸಿ. ಸುಧಾಕರ, ಡಾ. ಪ್ರಭಾವತಿ ಎನ್.ರಾವ್, ರೈತರ ಸಮಸ್ಯೆಗಳಿಗೆ ಪರಿಹಾರ ನೀಡಿದರು. ಬಿ.ವಿ. ಪಲ್ಲೇದ, ರಮೇಶ ಕೋಳಿವಾಡ, ಶಿವಾನಂದ ಕೋಳಿವಾಡ, ಚಂದ್ರಪ್ಪ ಹೊಸಮನಿ, ಚಂದ್ರಗೌಡ ದೊಡ್ಡಗೌಡ್ರ, ಗೋಪಾಲ ಭರಮಗೌಡ್ರ ಇತರರಿದ್ದರು. ಪ್ರಗತಿಪರ ರೈತ ಚನ್ನಪ್ಪ ಷಣ್ಮುಕಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net