ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಿ

18 KMP 01
ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ವಾಹನ ಚಾಲಕ, ಮಾಲೀಕರಿಗಾಗಿ ಅಪರಾಧ ತಡೆ ಜಾಗೃತಿ ಸಭೆಯಲ್ಲಿ ಪಿಐ ಕೆ.ಬಿ.ವಾಸುಕುಮಾರ್ ಮಾತನಾಡಿದರು. ಪ್ರಮುಖರಾದ ಬಸವರಾಜ, ಗಂಗಣ್ಣ, ವಿರುಪಾಕ್ಷಿ, ಆಟೋ ರಾಘವೇಂದ್ರ ಇತರರಿದ್ದರು.
Published on

ಕಂಪ್ಲಿ: ವಾಹನಗಳ ಮಾಲೀಕರು ವಿಮೆ ಸೇರಿ ಎಲ್ಲಾ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರತಕ್ಕದ್ದು ಎಂದು ಇಲ್ಲಿನ ಆರಕ್ಷಕ ನಿರೀಕ್ಷಕ ಕೆ.ಬಿ.ವಾಸುಕುಮಾರ್ ಹೇಳಿದರು.

ಪಟ್ಟಣದ ಆರಕ್ಷಕ ಠಾಣೆಯಲ್ಲಿ ಪ್ರಯಾಣಿಕರ ವಾಹನಗಳ ಚಾಲಕ, ಮಾಲಕರಿಗೆ ಅಪರಾಧ ತಡೆ ಜಾಗೃತಿ ಸಭೆಯಲ್ಲಿ ಬುಧವಾರ ಮಾತನಾಡಿದರು.

ಚಾಲಕ, ಮಾಲಕರು ಅಪಘಾತ ಪ್ರಕರಣಗಳನ್ನು, ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಪೊಲೀಸರ ಗಮನಕ್ಕೆ ತರುವಲ್ಲಿ ಮುಂದಾಗಬೇಕು. ರಾತ್ರಿ ವೇಳೆ ಕಾರ್ಯನಿರ್ವಹಿಸುವ ಆಟೋ ಚಾಲಕ, ಮಾಲಕರ ಪಟ್ಟಿಯನ್ನು ಪೊಲೀಸರಿಗೆ ನೀಡಬೇಕು.

ಗೂಡ್ಸ್ ವಾಹನದಲ್ಲಿ ನಿಗಧಿತ ಸಂಖ್ಯೆಗಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯಬಾರದು. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಸಭೆಯಲ್ಲಿ ವಾಹನಗಳ ಚಾಲಕ ಮಾಲಕರಾದ ವಿರೂಪಾಕ್ಷಿ, ಆಟೋ ರಾಘವೇಂದ್ರ, ಮಹೇಶ, ಸ್ವಾಮಿ ಇತರರಿದ್ದರು.

ಅಪರಾಧ ಜಾಗೃತಿ: ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಅಪರಾಧ ತಡೆ ಜಾಗೃತಿ ಸಭೆ ನಡೆಯಿತು. ಪಿಐ ಕೆ.ಬಿ.ವಾಸುಕುಮಾರ್ ಮಾತನಾಡಿ, ವಿದ್ಯಾರ್ಥಿನಿಯರು ಮೊಬೈಲ್‌ನ್ನು ಸದುಪಯೋಗಪಡಿಸಿಕೊಳ್ಳಬೇಕು. ಸೈಬರ್ ಅಪರಾಧಗಳಿಗೆ ಈಡಾಗದಂತೆ ಎಚ್ಚರಿಕೆವಹಿಸಬೇಕು. ದುಶ್ಚಟಗಳಿಗೆ ಬಲಿಯಾಗಬಾರದು. ಶಾಲೆ ಕಾಲೇಜಿಗೆ ಬಂದು ಹೋಗುವಲ್ಲಿ ಕಿರುಕುಳಗಳಿದ್ದಲ್ಲಿ ಪೊಲೀಸರ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net