ಪಟಾಕಿ ಅಂಗಡಿಗಳಲ್ಲಿ ಸುರಕ್ಷತೆ ಪರಿಶೀಲನೆ

CRACKERS
Published on

ನರಗುಂದ: ಇತ್ತೀಚೆಗೆ ಕೆಲವೆಡೆ ಸಂಭವಿಸಿದ ಪಟಾಕಿ ಗೋದಾಮಿನ ಬೆಂಕಿ ದುರಂತದಿಂದ ಎಚ್ಚೆತ್ತುಕೊಂಡಿರುವ ತಹಸೀಲ್ದಾರ್ ಶ್ರೀಶೈಲ ತಳವಾರ ನೇತೃತ್ವದ ಅಧಿಕಾರಿಗಳ ತಂಡ ಪಟ್ಟಣದ ವಿವಿಧ ಪಟಾಕಿ ಅಂಗಡಿ, ಗೋದಾಮುಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿತು.

ಪಟಾಕಿ ಮಾರಾಟ ಪರವಾನಗಿ ಹೊಂದಿರುವ ಪಟ್ಟಣದ ರಾಜು ಸವಳಕರ, ಪಾಂಡು ಜಾಧವ, ಸಿ.ಕೆ. ಬೆಳಗಾವಿ ಅವರ ಅಂಗಡಿಗೆ ಕಂದಾಯ, ಪೊಲೀಸ್, ಪುರಸಭೆ ಹಾಗೂ ಅಗ್ನಿಶಾಮಕ ಠಾಣೆ ಅಧಿಕಾರಿಗಳ ತಂಡ ಭೇಟಿ ನೀಡಿ ಅಗ್ನಿ ನಂದಿಸುವಿಕೆ ಹಾಗೂ ಹೆಚ್ಚುವರಿ ನೀರಿನ ಸೌಲಭ್ಯ ಹೊಂದಿರುವುದರ ಬಗ್ಗೆ ಪರಿಶೀಲನೆ ನಡೆಸಿದರು.

ಪುರಸಭೆಯ ಕಿರಿಯ ಆರೋಗ್ಯ ಸಹಾಯಕಿ ಪ್ರೀತಿ ಗವಿಮಠ, ಹೆಸ್ಕಾಂ ಅಧಿಕಾರಿ ಲಿಂಗರಾಜ ಬ್ಯಾಲಹುಣಸಿ, ಎ.ಎಚ್. ಅಮಾತಿ, ಎಂ.ವಿ. ಶೆಟ್ಟರ, ಅನಿಲ ಭೋವಿ, ನಾಗರಾಜ, ಕಂದಾಯ ನಿರೀಕ್ಷಕ ಎಸ್.ಎಲ್. ಪಾಟೀಲ, ಆನಂದ ಬನಪ್ಪನವರ, ಅಗ್ನಿ ಶಾಮಕ ದಳದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net