ರೆಡ್ ಸುರಕ್ಷಾ ಅಭಿಯಾನಕ್ಕೆ ಚಾಲನೆ

red fm
Published on

ಹುಬ್ಬಳ್ಳಿ: ಸಾಮಾಜಿಕ ಕಳಕಳಿಯ ಭಾಗವಾಗಿ ರೆಡ್ ಎಫ್​ಎಂ 93.5 ನಿಂದ ಹಮ್ಮಿಕೊಂಡಿರುವ ರೆಡ್ ಸುರಕ್ಷಾ ಅಭಿಯಾನದ ಪ್ರಯುಕ್ತ ಹೊಸೂರಿನ ಗಾಳಿ ದುರ್ಗಮ್ಮ ದೇವಿ ದೇವಸ್ಥಾನದ ಬಳಿ ಬೈಕ್ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಲಾಯಿತು.

ಪಿಎಸ್​ಐ ಮೋಹನ ಹಾಗೂ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸೇರಿ ಸವಾರರಿಗೆ ಹೆಲ್ಮೆಟ್ ನೀಡುವ ಮೂಲಕ ನಾಲ್ಕು ದಿನಗಳ (ಆ.19- ಆ.22) ಅಭಿಯಾನಕ್ಕೆ ಚಾಲನೆ ನೀಡಿದರು. ಹಾಫ್ ಹೆಲ್ಮೆಟ್ ಧರಿಸಿ ಬೈಕ್ ಚಾಲನೆ ಮಾಡುತ್ತಿದ್ದವರಿಗೂ ಸಂಪೂರ್ಣ ಸುರಕ್ಷತೆಯ ದೃಷ್ಟಿಯಿಂದ ಫುಲ್ ಹೆಲ್ಮೆಟ್ ನೀಡಿದ್ದು ವಿಶೇಷವಾಗಿತ್ತು. ಈ ಅಭಿಯಾನಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಯಿತು.

ಸಂಚಾರ ನಿಯಮ ಪಾಲಿಸುವಂತೆ, ಹೆಲ್ಮೆಟ್ ಧರಿಸಿ ಬೈಕ್ ಚಾಲನೆ ಮಾಡುವಂತೆ ಅರಿವು ಮೂಡಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಬರುವ ವಿವಿಧ ಟ್ರಾಫಿಕ್ ಜಂಕ್ಷನ್, ಸ್ಥಳೀಯ ಬಡಾವಣೆಗಳಲ್ಲಿ ಹೆಲ್ಮೆಟ್ ವಿತರಣೆ ಮಾಡಲಾಗುವುದು ಎಂದು ಸೇಲ್ಸ್ ವಿಭಾಗದ ಗ್ರೂಪ್ ಮ್ಯಾನೇಜರ್ ಕೃಷ್ಣ ಬೆಂಗೇರಿ ಮತ್ತು ಹಿರಿಯ ವ್ಯವಸ್ಥಾಪಕ ಮಂಜುನಾಥ ಸಣ್ಣಕುಂಬಾರ ತಿಳಿಸಿದರು.

ವಿ ಕೇರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ವಿವೇಕ ಪಾಟೀಲ, ಐಬಿಎಂಆರ್ ಗ್ರುಪ್ ಆಫ್ ಇನ್​ಸ್ಟಿಟ್ಯೂಟ್​ನ ಪ್ರೊ. ರೇಣುಕಾ, ಆಟೋ ಗ್ಲಾಮ್ ಮಾಲೀಕರು, ಹುಬ್ಬಳ್ಳಿ ಮೋಟೊ ವೀಲ್ಸ್​ನ ಸಂಗಮೇಶ, ರಿಷಿ ತಿವಾರಿ, ರೆಡ್ ಎಫ್​ಎಂ ಆರ್​ಜೆ ಮೇಘಾ, ಆರ್​ಜೆ ಮಾಧುರಿ, ಆರ್​ಜೆ ಪ್ರತೀಕ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net