ರೈಲ್ವೆ ಉದ್ಯೋಗಿಗಳಿಗೆ ಸುರಕ್ಷತಾ ಪ್ರಶಸ್ತಿ

New SWR
Published on

ಹುಬ್ಬಳ್ಳಿ :ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಸಂಭವನೀಯ ಅನಾಹುತಗಳನ್ನು ತಪ್ಪಿಸಿ, ಕರ್ತವ್ಯದಲ್ಲಿ ಉತ್ತಮ ಸಾಧನೆ ತೋರಿದ ವಿವಿಧ ವಿಭಾಗಗಳ ಉದ್ಯೋಗಿಗಳಿಗೆ ಸುರಕ್ಷತಾ ಪ್ರಶಸ್ತಿ ನೀಡಿ, ಬುಧವಾರ ಸನ್ಮಾನಿಸಲಾಯಿತು.

ನಗರದ ರೈಲ್ ಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಹೊಸಪೇಟೆಯ ಗೂಡ್ಸ್ ರೈಲಿನ ಲೋಕೊಪೈಲಟ್ ಮನೋಜ ಕುಮಾರ, ಹಿರಿಯ ಸಹಾಯಕ ಲೋಕೋಪೈಲಟ್ ಪಸಲಾದಿ ಪಿಚೈಯ್ಯ, ಹೆಡ್​ಕ್ವಾರ್ಟರ್​ನ ಇಲೆಕ್ಟ್ರಿಕಲ್ ವಿಭಾಗದ ಎಸ್​ಎಫ್​ಸಿ ಗೋವಿಂದ ಚವ್ಹಾಣ, ಹೊಸಪೇಟೆ ಇಲೆಕ್ಟ್ರಿಕ್ ವಿಭಾಗದ ರವೀಂದ್ರ ಕುಮಾರ ಬೈರ್ವಾ, ಚಿಕ್ಕಜಾಜೂರನ ಕೀಮ್ಯಾನ್ ನಾಗರಾಜ ಎಚ್., ಮೈಸೂರು ವಿಭಾಗದ ಹಿರಿಯ ಸಹಾಯಕ ಲೋಕೋಪೈಲಟ್ ಅಜಯಕುಮಾರ, ವಿಜಯಪುರದ ಲೋಕೋಪೈಲಟ್ ಶೈಲೇಂದ್ರ ಕುಮಾರ, ಹಿರಿಯ ಸಹಾಯಕ ಲೋಕೋಪೈಲಟ್ ಅಶೋಕ ಚಟ್ಟಿ, ಬೆಂಗಳೂರು ವಿಭಾಗದ ಲೋಕೋಪೈಲಟ್ ಸೂರ್ಯಮೋಹನ ಪ್ರಸಾದ, ಕೀಮ್ಯಾನ್ ಶಶಿಕುಮಾರ ಚಿಮ್ಮಳಗಿ, ಸುಬ್ರಹ್ಮಣ ರೋಡ್​ನ ಸಿಗ್ನಲ್ ವಿಭಾಗದ ಜೆಇ ಲೋಹಿತ ಕುಮಾರ, ಮೈಸೂರಿನ ಹಿರಿಯ ಟೆಕ್ನಿಶಿಯನ್ ಮೊಹ್ಮದ್ ಇಲಿಯಾಸ್, ಹೆಲ್ಪರ್ ಅಂಕಿತಕುಮಾರ ಗೊಂಡ್ ಅವರಿಗೆ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net