ಆಧ್ಯಾತ್ಮಿಕವಾಗಿ ಬೆಳವಣಿಗೆಯಿಂದ ಸದೃಢ ಸಮಾಜ : ಶ್ರೀ ಸದ್ಯೋಜಾತ್ ಸ್ವಾಮೀಜಿ

mng-13sep-shirali
Published on

ಮಂಗಳೂರು : ಚಿತ್ರಾಪುರ ಮಠ ಸಂಸ್ಥಾನ ಶಿರಾಲಿ ಇದರ ಮಠಾಧೀಶರಾದ ಶ್ರೀ ಸದ್ಯೋಜಾತ್ ಸ್ವಾಮೀಜಿ ಅವರು ವೈಶ್ಯ ಸಮಾಜದ ಡೊಂಗರಕೇರಿ ಶ್ರೀ ವೆಂಕಟರಮಣ ದೇವಳಕ್ಕೆ ಭೇಟಿ ನೀಡಿದರು. ಸಮಾಜ ಬಾಂಧವರಿಂದ ಗುರುಗಳಿಗೆ ಫಲ ಸಮರ್ಪಣೆ ಹಾಗೂ ಪಾದಪೂಜೆ ಸಲ್ಲಿಸಲಾಯಿತು.
ಈ ಸಂದರ್ಭ ಆಶೀರ್ವಚನ ನೀಡಿದ ಶ್ರೀ ಸದ್ಯೋಜಾತ್ ಸ್ವಾಮೀಜಿ ‘ ದೇವರ ವಿಜೃಂಭಣೆಯ ಉತ್ಸವಾದಿ ಕಾರ್ಯಗಳು ಹಾಗೂ ಲೌಕಿಕ ಜೀವನದ ಜತಗೆ ಸಮಾಜ ಆಧ್ಯಾತ್ಮಿಕವಾಗಿ ಬೆಳೆಯಬೇಕು ಆಗ ಮಾತ್ರ ಸಮಾಜ ಸದೃಢವಾಗುಹುದು ಎಂದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರವೀಣ್ ಶೇಟ್ ನಾಗ್ವೇಕರ್, ಮಾಜಿ ಆಡಳಿತ ಮೊಕ್ತೇಸರ ವರದರಾಯ ಸುಬ್ರಾಯ ನಾಗ್ವೇಕರ್, ದೇವಳದ ತಂತ್ರಿ ವಿದ್ವಾನ್ ಡಾ.ಸತ್ಯಕೃಷ್ಣ ಭಟ್, ಪ್ರಧಾನ ಅರ್ಚಕ ಜಯರಾಮ ಭಟ್, ನಿರಂಜನ ಭಟ್, ಡೊಂಗರಕೇರಿ ಮಹಾಲಕ್ಷ್ಮಿ ರವಳನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಗೋಪಿಚಾಂದ್ ವರದರಾಯ ಶೇಟ್, ಶೇಡಿಗುಡ್ಡೆ ಶ್ರೀ ಲಕ್ಷ್ಮೀ
ನಾರಾಯಣಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣಗೋಪಾಲ ಶೇಟ್ ಉಪಸ್ಥಿತರಿದ್ದರು. ವಿನೋದ್ ಸದಾಶಿವ ಶೇಟ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net