ಸದ್ವಿದ್ಯಾ ಶಾಲೆಯಲ್ಲಿ ಸಂಗೀತ ಲೋಕ ಸೃಷ್ಟಿದ ಗಾನಭೂಷಣ, ಗಾನಕಲಾವಿದ ವಿದ್ವಾನ್ ಡಾ.ಆರ್.ಕೆ.ಪದ್ಮನಾಭ

17
Published on

ಮೈಸೂರು: ಸದ್ವಿದ್ಯಾ ಶಾಲೆಯ ಟಿ.ಪಿ.ಕೈಲಾಸಂ ರಂಗಮಂಟಪದಲ್ಲಿ ಶುಕ್ರವಾರ ಸಂಜೆ ಸಂಗೀತ ಲೋಕ ಸೃಷ್ಟಿಯಾಗಿತ್ತು. ಗಾನಭೂಷಣ, ಗಾನಕಲಾವಿದ ವಿದ್ವಾನ್ ಡಾ.ಆರ್.ಕೆ.ಪದ್ಮನಾಭ ತಮ್ಮ ಕಂಠ ಸಿರಿ ಮೂಲಕ ಸಭಿಕರನ್ನು ಅಕ್ಷರಶಃ ಮಂತ್ರಮುಗ್ಧಗೊಳಿಸಿದರು.

ರಾಮೋತ್ಸವದ ಅಂಗವಾಗಿ ಮೈಸೂರಿನ ಪ್ರತಿಷ್ಠಿತ ಸದ್ದಿದ್ಯಾ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಶ್ರೀ ವೀರಾಂಜನೇಯಸ್ವಾಮಿ ಟ್ರಸ್ಟ್ ಆಯೋಜಿಸಿದ್ದ ‘ಕರ್ನಾಟಕ ಶಾಸ್ತ್ರೀಯ ಸಂಗೀತ’ ಕಾರ್ಯಕ್ರಮ ಸಂಗೀತ ಕಂಪು ಚೆಲ್ಲುವಲ್ಲಿ ಯಶಸ್ವಿಯಾಯಿತು. ಡಾ.ಆರ್.ಕೆ.ಪದ್ಮನಾಭ ಮತ್ತು ತಂಡ ನೀಡಿದ ಸಂಗೀತ ಕಛೇರಿ ಕೇಳುಗರ ಮನತಣಿಸಿತು.

ಡಾ.ಆರ್.ಕೆ.ಪದ್ಮನಾಭ ಅವರಿಗೆ ವಿದ್ವಾನ್ ಸಿ.ಎನ್.ಚಂದ್ರಶೇಖರ್(ಪಿಟೀಲು), ವಿದ್ವಾನ್ ಜಿ.ಎಸ್.ರಾಮಾನುಜನ್(ಮೃದಂಗ), ವಿದ್ವಾನ್ ರಾಮಾನುಜನ್(ಮೋರ್ಚಿಂಗ್) ಸಹಕಾರ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಪ್ರೊ.ಎಂ.ಎಸ್.ಕೆ. ನರಹರಿಬಾಬು, ಕಾರ್ಯದರ್ಶಿ ಎಂ.ಡಿ.ಗೋಪಿನಾಥ್, ಉಪಾಧ್ಯಕ್ಷ ಎಸ್.ಬಾಲಾಜಿ, ಸಹ ಕಾರ್ಯದರ್ಶಿ ಕೆ.ಎನ್.ಫಣೀಶ, ಆಡಳಿತ ಮಂಡಳಿಯ ಸದಸ್ಯ ಸಿ.ಆರ್. ನಾಗರಾಜ್, ಸಾಂಸ್ಕೃತಿಕ ಸಮಿತಿಯ ಗೌರವಾಧ್ಯಕ್ಷ ಕೆ.ರಾಘುರಾಮ್, ಸದಸ್ಯ ಆರ್.ಎಸ್.ಪ್ರಸನ್ನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net