ಸಾಧು-ಸತ್ಪುರುಷರನ್ನು ಪರೀಕ್ಷಿಸಬಾರದು

25 NRGL 1
Published on

ನರೇಗಲ್ಲ: ಜಗತ್ತಿನಲ್ಲಿ ಅವತಾರ ಎತ್ತಿ ಬಂದಿರುವ ಸಾಧು-ಸತ್ಪುರುಷರು ನಮ್ಮನ್ನು ಉದ್ಧಾರ ಮಾಡಲು ಬಂದಿರುತ್ತಾರೆ. ಅವರನ್ನು ಎಂದಿಗೂ ಪರೀಕ್ಷಿಸಲು ಹೋಗಬಾರದು ಎಂದು ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಹೇಳಿದರು.

ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಬುಧವಾರ ಆಯೋಜಿಸಿದ್ದ ಸದ್ಗುರು ಶ್ರೀ ಬ್ರಹ್ಮಚೈತನ್ಯರ 111ನೇ ಪುಣ್ಯಾರಾಧನಾ ಮಹೋತ್ಸವದಲ್ಲಿ ಅವರು ಮಾತನಾಡಿದರು.

ದೇಶದಲ್ಲಿರುವ ಅನೇಕ ಸಾಧು-ಸತ್ಪುರುಷರಲ್ಲಿ ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರು ಒಬ್ಬ ಮಹಾನ್ ಸತ್ಪುರುಷರಾಗಿದ್ದರು. ರಾಮನಾಮದ ಮೂಲಕ ಮುಕ್ತಿ ಪಡೆಯಬಹುದು ಎಂಬುದನ್ನು ಬ್ರಹ್ಮಚೈತನ್ಯರು ಜಗತ್ತಿಗೆ ಸಾರಿ ಹೇಳಿದರು. ಬ್ರಹ್ಮಚೈತ್ಯನರ ಚರಿತ್ರೆಯನ್ನು ಓದಿದರೆ ಜೀವನವನ್ನು ಹೇಗೆ ಪಾರಮಾರ್ಥಿಕದ ಕಡೆಗೆ ತಿರುಗಿಸಬಹುದು ಎಂಬುದು ತಿಳಿಯುತ್ತದೆ. ಕರ್ನಾಟಕದಲ್ಲಿಯೂ ಶ್ರೀ ಮಹಾರಾಜರು ಅನೇಕ ಭಕ್ತರನ್ನು ಉದ್ಧರಿಸಿದ್ದಾರೆ. ಅಲ್ಲದೆ, ಅನೇಕ ರಾಮ ಮಂದಿರಗಳನ್ನು ಸ್ಥಾಪಿಸಿದ್ದಾರೆ’ ಎಂದರು.

ಸುಮಂಗಲೆಯರು ಆರತಿ ಬೆಳಗಿ ಮಹಾರಾಜರ ಹಾಡು ಹೇಳಿದರು. ನಿವೃತ್ತ ಉಪನ್ಯಾಸಕ ಎಸ್.ಎಚ್. ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ, ನಿಖಿತಾ ಗ್ರಾಮಪುರೋಹಿತ, ಪದ್ಮಾ ಕುಲಕರ್ಣಿ, ರೂಪಾ ಗ್ರಾಮಪುರೋಹಿತ, ವಿಮಲಾಬಾಯಿ ಗ್ರಾಮಪುರೋಹಿತ, ಸೀಮಾ ಕೊಂಡಿ, ಜ್ಯೋತಿ ನಾಡಿಗೇರ, ಪ್ರಿಯಾ ಕುಲಕರ್ಣಿ, ಪ್ರಿಯಾ ನಾಡಿಗೇರ, ಪ್ರಭಾ ರಾಯಭಟ್ಟನವರ, ರಾಜಶ್ರೀ ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net