ದೈವಾರಾಧಕ ಸಾಧು ಪಾಣಾರ ನಿಧನ

udp-12-sadhu panara
Published on

ಉಡುಪಿ: ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸತ ದೈವಾರಾಧಕ ಸಾಧು ಪಾಣಾರ ಮಂಚಿಕೆರೆ (68) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು.

ದಿ. ದೋಗು ಮತ್ತು ದಿ. ಕರ್ಗಿ ದಂಪತಿ ಪುತ್ರ ಸಾಧು ಅವರು ಕಳೆದ 45 ವರ್ಷದಿಂದ ವಂಶಪಾರಂಪರ್ಯವಾಗಿ ಬಂದಿರುವ ದೈವಾರಾಧನೆಯಲ್ಲಿ ತೊಡಗಿಸಿಕೊಂಡಿದ್ದರು. ನರ್ತನ, ನುಡಿಗಟ್ಟು, ಪಾಡ್ದನ ಕಲೆಗಳನ್ನು ಸೊಗಸಾಗಿ ನೆರವೇರಿಸುತ್ತಿದ್ದ ಅವರು ಉಡುಪಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಜುಮಾದಿ, ವ್ಯಾಘ್ರ ಚಾಮುಂಡಿ, ಕಲ್ಲುಕುಟ್ಟಿಗ, ಪಂಜುರ್ಲಿ, ಬಗ್ಗು ಪಂಜುರ್ಲಿ, ಬೊಬ್ಬರ್ಯ, ಮಲೆಧೂಮಾವತಿ ದೈವಗಳ ನರ್ತಕರಾಗಿ ಸೇವೆ ಸಲ್ಲಿಸಿದ್ದರು. ಅವರ ಕಲಾ ಸೇವೆಯನ್ನು ಗುರುತಿಸಿ ಅನೇಕ ಸಂಘಸಂಸ್ಥೆಗಳು ಗೌರವಿಸಿವೆ. ಮೃತರು ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಪುತ್ರ ದಿನೇಶ್​ ಪಾಣಾರ ತಂದೆಯ ವೃತ್ತಿಯನ್ನೇ ಮುಂದುವರಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net